ಕಲಬುರಗಿ: ರೌಡಿಗಳ ಸಂಖ್ಯೆಯಲ್ಲಿ ಇಡೀ ರಾಜ್ಯದಲ್ಲಿಯೇ ಕಲಬುರಗಿ ನಂಬರ್ 1. ಈ ಮಾಹಿತಿಯನ್ನು ಖುದ್ದು ಪೊಲೀಸ್ ಇಲಾಖೆ ಹೊರಹಾಕಿದೆ. ಸದ್ಯ ಕೋಕಾ ಕಾಯ್ದೆಯಿಂದಾಗಿ ಕೊಂಚ ರೌಡಿಸಂ ಕಂಟ್ರೋಲ್ ಹಂತಕ್ಕೆ ಬಂದಿದೆಯಂತೆ.
ಕಲಬುರಗಿಯಲ್ಲಿ ಆಗಾಗ ಸಿನಿಮಾ ಸ್ಟೈಲ್ ನಲ್ಲಿ ರೌಡಿಸಂ, ದರೋಡೆ, ಕೊಲೆಗಳು ನಡೀತಾನೆ ಇರುತ್ತದೆ. ಇನ್ನೂ ಮೀಸೆ ಚಿಗುರದ ಎಷ್ಟೋ ಯುವಕರು ಜನರನ್ನು ಗದರಿಸಿ, ಬೆದರಿಸಿ ಹಣ ವಸೂಲಿ ಮಾಡೋದೆಲ್ಲಾ ಕಾಮನ್. ಹೀಗಾಗಿಯೇ ಪೊಲೀಸರು ರೌಡಿಗಳ ಪರೇಡ್ ಮಾಡುತ್ತಾನೆ ಇದ್ದಾರೆ.
ಅಷ್ಟೇ ಅಲ್ಲ ಪಾತಕಲೋಕಕ್ಕೆ ಎಂಟ್ರಿ ಕೊಡೋ ಹುಡುಗರಿಗೆ ರೌಡಿಶೀಟರ್ ಓಪನ್ ಮಾಡ್ತಿದ್ದಾರೆ. ಹೀಗಾಗಿ ರೌಡಿಗಳ ಸಂಖ್ಯೆಯಲ್ಲಿ ಕಲಬುರಗಿ ರಾಜ್ಯದಲ್ಲೇ ನಂ. 1 ಆಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿಯೇ 3749 ಜನರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ.
ರೌಡಿಸಂ ನಿಲ್ಲಿಸಲೇ ಬೇಕು ಎಂದು ಪಣ ತೊಟ್ಟಿರೋ ಕಲಬುರಗಿ ಪೊಲೀಸರು ಕೋಕಾ ಕಾಯ್ದೆ ಜಾರಿಗೆ ತಂದಿದ್ದು, ಈಗಾಗಲ್ಲೇ ಕುಖ್ಯಾತ ರೌಡಿಗಳನ್ನು ಜೈಲಿಗಟ್ಟಿದ್ದಾರೆ. ಹೀಗಾಗಿ ಜನರು ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.
ರೌಡಿಗಳ ಚಳಿ ಬಿಡಿಸಲು ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಖಡಕ್ ಹೆಜ್ಜೆಯಿಡುತ್ತಿರೋದು ಶ್ಲಾಘನೀಯ.