ರಾಂಚಿ: ಜಾರ್ಖಂಡ್‍ನ ಲಿಟ್ಟಿಪಾಡಾ ವಿಧಾನಸಭಾ ಕ್ಷೇತ್ರದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದ ಶಾಸಕ ಸೈಮನ್ ಮರಂಡಿ ಮೊದಲ ಬಾರಿಗೆ ‘ಕಿಸ್ಸಿಂಗ್ ಕಾಂಪಿಟೇಶನ್’ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು ಈಗ ಸುದ್ದಿಯಾಗಿದೆ.
ರಾಜ್ಯದ ಪಾಕುರ್ ಜಿಲ್ಲೆಯ ಲಿಟ್ಟಿಪಾಡಾ ಬ್ಲಾಕ್ ನ ದುಮರೈ ಎಂಬ ಗ್ರಾಮದ ಸಿಡೋ-ಕನ್ಹೂ ಜಾತ್ರೆಯಲ್ಲಿ ಈ ಚುಂಬನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಸಾವಿರಾರು ಜನರ ಮುಂದೆ ಸ್ಪರ್ಧಿಗಳು ತಮ್ಮ ಸಂಗಾತಿಗೆ ಲಿಪ್ ಲಾಕ್ ಮಾಡಿದ್ರು.
- Advertisement
- Advertisement
ಸ್ಪರ್ಧೆಯ ಷರತ್ತು: 18 ವರ್ಷ ಮೇಲ್ಪಟ್ಟ ಬುಡಕಟ್ಟು ಜನಾಂಗದ ದಂಪತಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸುವರು ಮದುವೆಯಾಗಿದ್ದು, ಯಾವುದೇ ಸಂಕೋಚವಿಲ್ಲದೇ ನಿರಂತರವಾಗಿ ಕಿಸ್ ಮಾಡಬೇಕು. ಅತೀ ಹೆಚ್ಚು ಸಮಯದವರೆಗೆ ಯಾರು ಕಿಸ್ ಮಾಡುತ್ತಾರೋ ಅವರು ಈ ಸ್ಪರ್ಧೆಯ ವಿಜೇತರಾಗುತ್ತಾರೆ.
ಈ ರೀತಿಯ ಸ್ಪರ್ಧೆಗಳು ಈಗಿನ ಆಧುನಿಕ ಕಾಲದಲ್ಲಿ ಅವಶ್ಯವಾಗಿದ್ದು, ಇದರಿಂದ ದಂಪತಿಗಳ ನಡುವೆ ಉಂಟಾಗುವ ವೈಮನಸ್ಸು ಮತ್ತು ವಿಚ್ಛೇದನ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಶಾಸಕ ಸೈಮನ್ ಮರಂಡಿ ಹೇಳಿದ್ದಾರೆ.
ಬುಡಕಟ್ಟು ಜನಾಂಗದ ಜನರು ತುಂಬಾ ಮುಗ್ಧರು ಹಾಗು ಅನಕ್ಷರಸ್ತರಾಗಿದ್ದಾರೆ. ಕುಟುಂಬ ನಿರ್ವಹಣೆ ಮತ್ತು ಆಧುನಿಕತೆಯ ಬಗ್ಗೆ ಹೆಚ್ಚಾಗಿ ತಿಳುವಳಿಕೆಯನ್ನು ಹೊಂದಿಲ್ಲ. ಈ ಸ್ಪರ್ಧೆಯಿಂದಾಗಿ ಆಧುನಿಕ ಸಮಾಜದ ವ್ಯವಸ್ಥೆ ಮತ್ತು ಕುಟುಂಬ ನಿರ್ವಹಣೆಯ ಜವಬ್ದಾರಿಗಳನ್ನು ಅರ್ಥ ಮಾಡಿಸಲು ಸಾಧ್ಯವಾಗುತ್ತದೆ. ಈ ರೀತಿಯ ಸ್ಪರ್ಧೆಗಳಿಂದ ಪತಿ-ಪತ್ನಿ ನಡುವೆ ಪ್ರೀತಿ, ವಿಶ್ವಾಸ, ಬಾಂಧವ್ಯ ವೃದ್ಧಿಯಾಗಲು ಸಹಕಾರಿ ಆಗಲಿದೆ ಎಂದು ಸೈಮನ್ ಮರಂಡಿ ಹೇಳುತ್ತಾರೆ.
ಸ್ಪರ್ಧೆಗೆ ವಿರೋಧ: ಈ ಸ್ಪರ್ಧೆ ಆಯೋಜನೆಯ ಬಗ್ಗೆ ಹಲವು ರಾಜಕೀಯ ಮುಖಂಡರು ಮತ್ತು ಧರ್ಮಗುರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತ ಸಂಸ್ಕೃತಿಯಿಂದ ಕೂಡಿದ ದೇಶ. ಆದರೆ ಶಾಸಕರು ಭಾರತವನ್ನು ಇಂಗ್ಲೆಂಡ್ ಮಾಡಲು ಹೊರಟಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ದುಮಾರಿಯಾ ಜಾತ್ರೆ ಕಳೆದ 37 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಬುಡಕಟ್ಟು ನೃತ್ಯ, ಬಿಲ್ಲುಗಾರಿಕೆ, ಓಡುವ ಸ್ಪರ್ಧೆಗಳನ್ನ ಆಯೋಜಿಸಲಾಗುತ್ತದೆ. ಈ ಬಾರಿ ಚುಂಬನ ಸ್ಪರ್ಧೆಯನ್ನ ಈ ಪಟ್ಟಿಗೆ ಸೇರಿಸಲಾಗಿದೆ. ಈ ಹಿಂದೆ ಸ್ಪರ್ಧಗಳು ಚಿಕ್ಕ ಜಾಗದಲ್ಲಿ ಆಯೋಜನೆಯಾಗುತ್ತಿತ್ತು. ಆದ್ರೆ ಈ ಬಾರಿ ಫುಟ್‍ಬಾಲ್ ಮೈದಾನದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕಿಸ್ಸಿಂಗ್ ಕಾಂಪಿಟೇಶನ್ ನೋಡಲು ಸುತ್ತಲಿನ ಹಳ್ಳಿ ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಎರಡು ದಿನಗಳ ಕಾಲ ನಡೆಯುವ ಸಿಡೋ-ಕನ್ಹೂ ಜಾತ್ರೆ ಶುಕ್ರವಾರ ಆರಂಭವಾಗಿ ಶನಿವಾರ ಅಂತ್ಯಗೊಂಡಿದೆ.