ಭಾರತ್ ಜೋಡೋ ಯಾತ್ರೆ – ಬಾಲಕನಿಗೆ ಕರಾಟೆ ಪಂಚ್ ಹೇಳ್ಕೊಟ್ಟ ರಾಹುಲ್

Advertisements

ಹೈದರಾಬಾದ್: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಪುಟ್ಟ ಬಾಲಕನೊಬ್ಬನಿಗೆ ಕರಾಟೆಯಾಡುವುದು ಹೇಗೆ ಎಂಬುವುದನ್ನು ಹೇಳಿಕೊಟ್ಟಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisements

ಈ ವೀಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಜಪಾನ್‍ನ ಸಮರ ಕಲೆ ಐಕಿಡೊದಲ್ಲಿ 9Aikido) ಬ್ಲಾಕ್ ಬೆಲ್ಟ್ (Black Belt) ಪಡೆದುಕೊಂಡಿರುವ ರಾಹುಲ್ ಗಾಂಧಿ ಅವರು, ಕರಾಟೆ (Karate) ಇಷ್ಟಪಡುವ ಮಕ್ಕಳ ಗುಂಪಿನೊಂದಿಗೆ ಪುಟ್ಟ ಕ್ಷಣವನ್ನು ಕಳೆದಿರುವುದನ್ನು ಕಾಣಬಹುದಾಗಿದೆ. 23-ಸೆಕೆಂಡುಗಳಿರುವ ವೀಡಿಯೋದಲ್ಲಿ ಪುಟ್ಟ ಬಾಲಕನಿಗೆ ಕರಾಟೆ ಪಂಚ್‍ಗಳನ್ನು ಹೇಗೆ ಹೊಡೆಯಬೇಕೆಂದು ಕಲಿಸುತ್ತಿರುವುದು ಮತ್ತು ಬಾಲಕ ತಪ್ಪು ಮಾಡಿದಾಗ ಸರಿಪಡಿಸುವುದನ್ನು ನೋಡಬಹುದಾಗಿದೆ.

Advertisements

ಕೊನೆಯಲ್ಲಿ ಬಾಲಕನ ಕರಾಟೆಯನ್ನು ನೋಡಿ ಮುಗುಳು ನಗೆ ಬೀರುತ್ತಾ, ಬಾಲಕನನ್ನು ಪ್ರೋತ್ಸಾಹಿಸುತ್ತಾ ರಾಹುಲ್ ಪಾದಯಾತ್ರೆಯನ್ನು ಮುಂದುವರೆಸುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಜೊತೆಗೆ, ತಂತ್ರ ತಪ್ಪಾದರೆ, ದೇಶ ವಿನಾಶದ ಹಾದಿಯಲ್ಲಿ ಸಾಗುತ್ತದೆ. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಬಾಲಕನಿಗೆ ಸರಿಯಾದ ತಂತ್ರವನ್ನು ತೋರಿಸಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ.

Live Tv

Advertisements
Exit mobile version