ಗಾಂಧಿನಗರ: ಹಣೆಗೆ ತಿಲಕವಿಟ್ಟು ಕಾಂಗ್ರೆಸ್ ಮುಖಂಡ ರಾಹುಲ್ ಅವರು ಗುಜರಾತ್‍ನ ದ್ವಾರಕಾಧೀಶದ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದರು.
ರಾಹುಲ್‍ಗಾಂಧಿ ಅವರು ಮಧ್ಯಾಹ್ನ ಸುಮಾರಿಗೆ ವಿಶೇಷ ವಿಮಾನದ ಮೂಲಕ ಗಾಂಧಿ ಜಾಮ್ ನಗರಕ್ಕೆ ಬಂದ ಅವರನ್ನು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್, ಮಾಜಿ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಸೇರಿದಂತೆ ಪಕ್ಷದ ಹಲವಾರು ಹಿರಿಯ ನಾಯಕರು ಸ್ವಾಗತಿಸಿದರು.
Advertisement
Advertisement
ನಂತರ ಅವರು ದ್ವಾರಕಾಧೀಶದ ಶ್ರೀಕೃಷ್ಣ ದೇವಾಲಯಕ್ಕೆ ತಲುಪಿದರು. ಅಲ್ಲಿ ರಾಹುಲ್ ಗಾಂಧಿ ಅವರನ್ನು ಸಾಂಪ್ರದಾಯಿಕ ಜಾನಪದ ನೃತ್ಯದ ಮೂಲಕ ಸ್ವಾಗತಿಸಲಾಯಿತು. ರಾಹುಲ್ ಗಾಂಧಿ ಹಣೆಗೆ ತಿಲಕವನ್ನು ಇಟ್ಟುಕೊಂಡು, ಪೂಜಾ ಸಾಮಾಗ್ರಿ ಹಾಗೂ ಧಾರ್ಮಿಕ ಧ್ವಜವನ್ನು ತಲೆಯ ಮೇಲೆ ಇಟ್ಟುಕೊಂಡು ದೇವಾಲಯವನ್ನು ಪ್ರವೇಶಿಸಿದರು.
Advertisement
ದೇವಾಲಯದ ಒಳಗೆ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು. ನಂತರ ರಾಹುಲ್ ಗಾಂಧಿ ಅರ್ಪಿಸಿದ ಧಾರ್ಮಿಕ ಧ್ವಜವನ್ನು ಸಂಪ್ರದಾಯದಂತೆ ದೇವಾಲಯದ ಮೇಲೆ ಹಾರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ತಿಳಿಸಿದರು.
Advertisement
ಕೃಷ್ಣನಿಗೆ ನಮನ ಸಲ್ಲಿಸಿದ ಬಳಿಕ, ಅವರು ಪಕ್ಷದ ಸ್ಥಳೀಯ ಮುಖಂಡರೊಂದಿಗೆ ದೇವಸ್ಥಾನದ ಬಳಿಯ ಊಟದ ಹಾಲ್‍ನಲ್ಲಿ ಲಘು ಉಪಹಾರ ಸೇವಿಸಿದರು. ಬಳಿಕ ಪಕ್ಷದ ಚಿಂತನ ಶಿಬಿರದ ಸ್ಥಳಕ್ಕೆ ತೆರಳಿದರು. ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‍ನಲ್ಲಿ ಈಗಿನಿಂದಲೇ ಮತದಾರರನ್ನು ಸೆಳೆಯಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನ ಯೋಧ ಅಲ್ತಾಫ್ ಅಹ್ಮದ್‍ಗೆ ಭಾವಪೂರ್ಣ ವಿದಾಯ- ಧ್ವಜ ಸ್ವೀಕರಿಸೋವಾಗ ಅಳುತ್ತಾ ಕುಸಿದು ಬಿದ್ದ ಪತ್ನಿ
2017ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚೆಯೂ ರಾಹುಲ್ ಗಾಂಧಿ ಅವರು ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್‍ನ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ