ಶ್ರೀನಗರ: ಉಗ್ರರು ಮುಗ್ದ ಜನರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಬದಲು ಸಂಪತ್ತನ್ನು ಲೂಟಿ ಮಾಡಿದ ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಲಿ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಭಾರೀ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಗಿಲ್‍ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗನ್ ಹಿಡಿದ ಉಗ್ರರು ತಮ್ಮ ಜನರು ಹಾಗೂ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ಕೊಲ್ಲುತ್ತಿದ್ದಾರೆ. ಇವರನ್ನು ಯಾಕೆ ಕೊಲ್ಲುತ್ತೀರಿ. ಕಾಶ್ಮೀರದ ಸಂಪತ್ತನ್ನು ಲೂಟಿ ಮಾಡಿದ ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಿ. ಲೂಟಿ ಮಾಡಿದವರನ್ನು ಎಂದಾದರೂ ಕೊಲೆ ಮಾಡಿದ್ದೀರಾ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.
Advertisement
Advertisement
ತಮ್ಮ ಹೇಳಿಕೆ ಕುರಿತು ವಿವಾದ ಸೃಷ್ಟಿಯಾಗುತ್ತಿದ್ದಂತೆ ಈ ಕುರಿತು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಇಂದು ಸ್ಪಷ್ಟನೆ ನೀಡಿದ್ದು, ಭ್ರಷ್ಟಾಚಾರದಿಂದ ಬೇಸತ್ತು ಆಕ್ರೋಶದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದೇನೆ. ಒಬ್ಬ ರಾಜ್ಯಪಾಲನಾಗಿ ಆ ರೀತಿಯ ಹೇಳಿಕೆ ನೀಡಿಲ್ಲ. ನನ್ನ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಹಲವು ರಾಜಕೀಯ ನಾಯಕರು ಹಾಗೂ ಉನ್ನತ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ಭಾನುವಾರ ನಾನು ಮಾಡಿದ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅಲ್ಲದೆ, ಕಾಶ್ಮೀರದ ಬೃಹತ್ ಕುಟುಂಬಗಳು ಸಾರ್ವಜನಿಕರ ಹಣವನ್ನು ಲೂಟಿ ಮಾಡಿರುವ ಮೂಲಕ ಪ್ರಪಂಚದಾದ್ಯಂತ ಆಸ್ತಿ ಸಂಪಾದಿಸಿದ್ದಾರೆ ಎಂದು ಕಾಶ್ಮೀರದ ರಾಜಕೀಯ ಮುಖಂಡರ ವಿರುದ್ಧ ರಾಜ್ಯಪಾಲರು ಕಿಡಿಕಾರಿದ್ದಾರೆ.