ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಮೊದಲ ಮನ್ ಕಿ ಬಾತ್ ಭಾಷಣದಲ್ಲಿ ಕರ್ನಾಟಕ ಹಾಗೂ ಕನ್ನಡಿಗರ ಹೆಸರನ್ನು ಪ್ರಸ್ತಾಪ ಮಾಡಿದ್ದು, ಪ್ರಮುಖವಾಗಿ ಮೈಸೂರು ಹುಡುಗನ ಕಥೆಯನ್ನು ಹಂಚಿಕೊಂಡರು.
ಮೋದಿ ಅವರು ಪ್ರಧಾನಿಯಾದ ಬಳಿಕ ನಡೆಸಿಕೊಡುತ್ತಿರುವ 40ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದ್ದು, ಪ್ರಮುಖವಾಗಿ ಮಹಿಳಾ ಸಬಲೀಕರಣ, ಜನಔಷಧಿ ಹಾಗೂ ಗಣರಾಜೋತ್ಸವದ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.
Advertisement
ಈ ಬಾರಿಯ ಮನ್ ಕಿ ಬಾತ್‍ನಲ್ಲಿ ಮೋದಿ ಕರ್ನಾಟಕದ ಮೈಸೂರು ಹುಡುನ ಬಗ್ಗೆ ಪ್ರಸ್ತಾಪಿಸಿ, ಮೈಸೂರಿನ ದರ್ಶನ್ ಎನ್ನುವವರು ಮೈ ಗವರ್ನಮೆಂಟ್ ಆಪ್ ನಲ್ಲಿ ಪ್ರಧಾನ ಮಂತ್ರಿ ಜನಔಷಧಿ ಯೋಜನೆ ಅಡಿಯಲ್ಲಿ ಔಷಧಿ ಖರೀದಿಸಿದರೆ ಎಷ್ಟು ಉಳಿತಾಯ ಆಗುತ್ತಿದೆ ಎಂಬುದರ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ ಎಂದು ಮೋದಿ ಹೇಳಿದರು. ಈ ಯೋಜನೆಯಿಂದ ದರ್ಶನ್ ಅವರು ತಾವು ಈ ಮೊದಲು ನೀಡುತ್ತಿದ್ದ ಹಣದಲ್ಲಿ ಶೇ.75 ರಷ್ಟು ಉಳಿತಾಯ ಮಾಡಿದ್ದಾರೆ ಎಂದು ಹೇಳಿದರು.
Advertisement
Darshan from Karnataka shared how the Jan Aushadhi initiative provided him quality and affordable healthcare. He also wanted me to speak about this initiative, which I did during today’s #MannKiBaat. https://t.co/1RvKCMg0wb
— Narendra Modi (@narendramodi) January 28, 2018
Advertisement
ಮಹಿಳಾ ಸಬಲೀಕರಣ ವಿಚಾರವಾಗಿ ಕಲ್ಪನಾ ಚಾವ್ಲಾ ಅವರ ಸಾಧನೆಯನ್ನು ಸ್ಮರಿಸಿದ ಅವರು, ನಮ್ಮ ಸಂಸ್ಕೃತ ಭಾಷೆ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ತಿಳಿಸಲಾಗಿದ್ದು, ನಮಗೇ ಒಂದು ಹೆಣ್ಣು ಮಗು ಇದ್ದಾರೆ 10 ಗಂಡು ಮಕ್ಕಳಿಗೆ ಸಮಾನ ಎಂಬ ವಾಕ್ಯವನ್ನು ಸ್ಮರಿಸಿದರು.
Advertisement
ಬೆಳಗಾವಿಯ ಸೀತವ್ವ ಜೋಡಟ್ಟ ಅವರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ಸೀತವ್ವ ಅವರನ್ನು ಸಬಲೀಕರಣದ ದೇವಿ ಎಂದರೆ ತಪ್ಪಾಗುವುದಿಲ್ಲ. ಏಳನೇ ವಯಸ್ಸಿಗೆ ದೇವದಾಸಿಯನ್ನಾಗಿ ಮಾಡಲಾಗಿತ್ತು. ಆದರೆ ಸೀತವ್ವ ದೇವದಾಸಿಯರ ಕಲ್ಯಾಣಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅಲ್ಲದೇ 30 ವರ್ಷಗಳ ಕಾಲ ಹಲವು ದಲಿತ ಮಹಿಳೆಯ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೊಗಳಿದರು.
ಈ ಬಾರಿಯ ಗಣರಾಜ್ಯೋತ್ಸವವ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ಸೀತವ್ವ ಅವರನ್ನು ಆಯ್ಕೆ ಮಾಡಲಾಗಿದೆ.
This year’s Padma Awards honoured selfless individuals who are bringing a positive change at the grassroots level. #MannKiBaat https://t.co/FT9SpyxLAs
— Narendra Modi (@narendramodi) January 28, 2018