ಭೋಪಾಲ್: ಸಾಕು ಶ್ವಾನಗಳಿಂದಾಗಿ ಎರಡು ಮನೆ ಮಾಲೀಕರ ನಡುವೆ ನಡೆದ ಜಗಳ ಇಬ್ಬರನ್ನು ಹತ್ಯೆ ಮಾಡುವಲ್ಲಿ ಕೊನೆಯಾದ ಘಟನೆ ಮಧ್ಯಪ್ರದೇಶದ ಇಂದೋರ್ (Indore) ನಲ್ಲಿ ನಡೆದಿದೆ.
ಇಬ್ಬರನ್ನು ಗುಂಡಿಕ್ಕಿ ಕೊಂದ ಆರೋಪಿಯನ್ನು ರಾಜ್ಪಾಲ್ ಸಿಂಗ್ ರಾಜಾವತ್ ಎಂದು ಗುರುತಿಸಲಾಗಿದ್ದು, ಈತ ಬ್ಯಾಂಕ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ Security Guard in Bank) ಆಗಿ ಕೆಲಸ ಮಾಡುತ್ತಿದ್ದ. ಈತ ಗುರುವಾರ ತನ್ನ ಮನೆಯ ಬಾಲ್ಕನಿಯಿಂದ ಶೂಟೌಟ್ ಮಾಡಿ ಇಬ್ಬರ ಕೊಲೆಗೆ ಕಾರಣವಾಗಿದ್ದಾನೆ. ಅಲ್ಲದೆ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.
Advertisement
Advertisement
ರಾಜಾವತ್ ಮತ್ತು ಅವರ ನೆರೆಹೊರೆಯವರಾದ ವಿಮಲ್ ಅಚಲಾ (35) ರಾತ್ರಿ 11 ಗಂಟೆಗೆ ಕೃಷ್ಣಾ ಬಾಗ್ ಕಾಲೋನಿಯ ಕಿರಿದಾದ ಲೇನ್‍ನಲ್ಲಿ ತಮ್ಮ ಸಾಕುನಾಯಿಗಳನ್ನು ಹಿಡಿದು ನಡೆದುಕೊಂಡು ಹೋಗುತ್ತಿದ್ದಾಗ ಎರಡೂ ಶ್ವಾನಗಳು ಜಗಳ ಮಾಡಿಕೊಂಡವು. ಈ ವೇಳೆ ಶ್ವಾನಗಳ ಮಾಲೀಕರ ನಡುವೆಯೂ ವಾಗ್ವಾದ ನಡೆಯಿತು. ಇದೇ ಸಿಟ್ಟಿನಿಂದ ಬಂದ ರಾಜಾವತ್, ತನ್ನ 12-ಬೋರ್ ರೈಫಲ್‍ನೊಂದಿಗೆ ಮನೆಯ ಬಾಲ್ಕನಿಯ ಮೇಲೇರಿದ್ದಾನೆ. ನಂತರ ಅಲ್ಲಿಂದಲೇ ಶೂಟೌಟ್ ಮಾಡಿದ್ದಾನೆ.
Advertisement
ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಮೃತ ಅಚಲಾ ನಗರದ ನಿಪಾನಿಯಾ ಪ್ರದೇಶದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ. ಇನ್ನೊಬ್ಬನನ್ನು ರಾಹುಲ್ ವರ್ಮಾ (27) ಎಂದು ಗುರುತಿಸಲಾಗಿದೆ. ಶೂಟೌಟ್ ಆದ ತಕ್ಷಣವೇ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಾವತ್, ಅವರ ಪುತ್ರ ಸುಧೀರ್ ಮತ್ತು ಇನ್ನೊಬ್ಬ ಸಂಬಂಧಿ ಶುಭಂ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಮಿಟಿಗೆ ಸೇರಿಸಿಕೊಳ್ಳದಿದ್ದಕ್ಕೆ ಐತಿಹಾಸಿಕ ದೇವಸ್ಥಾನಲ್ಲಿ ನಡೆಯಿತು ಕಳ್ಳತನ
ಗ್ವಾಲಿಯರ್ ಮೂಲದ ರಾಜಾವತ್ ಅವರು ಪರವಾನಗಿ ಪಡೆದ 12-ಬೋರ್ ರೈಫಲ್ ಅನ್ನು ಹೊಂದಿದ್ದರಿಂದ ಇಂದೋರ್‍ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Web Stories