ಗಾಂಧಿನಗರ: ರಸ್ತೆ ಅಪಘಾತವಾಗಿ ಕಾರಿನಿಂದ ಬಿದ್ದ ಬಿಯರ್ ಬಾಟಲ್ ಗಳನ್ನು ಪಡೆಯಲು ಜನರು ಮುಗಿಬಿದ್ದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ವಡೋದರ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ದುಮಾದ್ ಎಂಬಲ್ಲಿ ಮರ್ಸಿಡೀಸ್ ಬೆಂಜ್ ಮತ್ತು ಸೆಲೆರಿಯೋ ನಡುವೆ ಅಪಘಾತ ಸಂಭವಿಸಿತ್ತು. ಈ ಬೆಂಜ್ ಗುದ್ದಿದ ರಭಸಕ್ಕೆ ಸೆಲೆರಿಯೋ ಕಾರಿನ ಡೋರ್ ಗಳು ಓಪನ್ ಆಗಿ ಅದರ ಒಳಗಡೆ ಇದ್ದ ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದಿತ್ತು.
Advertisement
ಮದ್ಯದ ಬಾಟಲಿಗಳನ್ನು ನೋಡಿದ್ದೆ ತಡ ಜನ ತಾಮುಂದು ನಾಮುಂದು ಎಂಬಂತೆ ಹೆಕ್ಕಿಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
#Gujarat: Car illegally carrying liquor met with an accident near Dumad in #Vadodara; villagers pounced on the car to loot the cans. pic.twitter.com/llbRIEtTB3
— ANI (@ANI) October 15, 2017
Advertisement
ಗುಜರಾತ್ ನಲ್ಲಿ ಮದ್ಯ ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆದರೂ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲೈಸೆನ್ಸ್ ಹೊಂದಿರುವ ಮಳಿಗೆಗಳಲ್ಲಿ ಮದ್ಯ ಮಾರಾಟವನ್ನು ಮಾಡಬಹುದಾಗಿದೆ.
Advertisement
ಗುಜರಾತ್ ನಲ್ಲಿ ಮದ್ಯ ತಯಾರಿಸುವುದು, ಮಾರಾಟ ಮಾಡುವುದು ಕಂಡು ಬಂದರೆ ರೂ. 5 ಲಕ್ಷ ರೂ. ದಂಡ ಹಾಗೂ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಜನರು ಮದ್ಯದ ಬಾಟಲಿಗಳು ಹೆಕ್ಕಿಕೊಳ್ಳುವುದನ್ನು ನೋಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ಮದ್ಯಕ್ಕೆ ಆಸೆ ಪಟ್ಟಿದ್ದರು. ಹೀಗಾಗಿ ಬಿಟ್ಟಿಯಾಗಿ ಸಿಕ್ಕಿದ್ದಕ್ಕೆ ಮುಗಿ ಬಿದ್ದಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.