Sunday, 22nd July 2018

Recent News

ಅಲ್ಪಸಂಖ್ಯಾತ ಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿದ ಪಾಕ್ ಪ್ರಧಾನಿ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹಿದ್ ಖಕನ್ ಅಬ್ಬಾಸಿ ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದು, ಪಾಕ್ ಸರ್ಕಾರವು ಅಲ್ಪ ಸಂಖ್ಯಾತ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಪಾಕ್ ಸರ್ಕಾರವು ದೇಶದ ಅಲ್ಪಸಂಖ್ಯಾತ ಹಿಂದೂಗಳ ಅಭಿವೃದ್ಧಿಗೆ ಬದ್ಧವಾಗಿದ್ದು, ಅವರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಲಾವುದು. ಪವಿತ್ರ ಪ್ರವಾದಿಗಳ ಸುವರ್ಣ ತತ್ವಗಳು ನಮಗೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಮಾರ್ಗದರ್ಶನವನ್ನು ನೀಡುತ್ತವೆ. ದೇಶಾದ್ಯಂತ ಇಂದು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಎಲ್ಲರ ಜೀವನದಲ್ಲೂ ಶಾಂತಿ ಮತ್ತು ಸಂತೋಷ ನೆಲೆಸಲಿ ಎಂದು ಹೇಳಿದರು.

ದೇಶದಲ್ಲಿ ಧರ್ಮಗಳ ನಡುವಿನ ಸೌಹಾರ್ದವನ್ನು ಉತ್ತೇಜಿಸುವ ಅಗತ್ಯ ಇಂದಿನಂತಯೇ ನಾಳೆ ಇರುವುದಿಲ್ಲ. ಯಾವುದೇ ಧರ್ಮವು ಹಿಂಸೆ ಹಾಗೂ ಅಶಾಂತಿಯನ್ನು ಬೋಧಿಸುವುದಿಲ್ಲ. ಪ್ರತಿ ಧರ್ಮವು ಮಾನವೀಯತೆಗಾಗಿ ಶಾಂತಿ, ಸೌಹಾರ್ದತೆ ಹಾಗೂ ಪ್ರೀತಿಯನ್ನು ಕಲಿಸುತ್ತದೆ ಎಂದು ಹೇಳಿದರು.

ದೇಶದ ಎಲ್ಲಾ ಧಾರ್ಮಿಕ ಮುಖಂಡರು ಧರ್ಮಗಳ ನಡುವಿನ ಪ್ರಮುಖ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಹಾಗೂ ಸಮಾಜವನ್ನು ಮಾನವೀಯ ಮೌಲ್ಯಗಳೆಡೆ ಕೊಂಡ್ಯೊಯಬೇಕು ಎಂದು ಕೋರಿದರು.

ದೇಶದಲ್ಲಿ ನೆಲೆಸಿರುವ ಹಿಂದೂ ಸಮುದಾಯದ ಜನರು ದೇಶದ ಪ್ರಗತಿಗೆ ಕಾರಣವಾಗುವ ತಮ್ಮ ಕೊಡುಗೆಗಳನ್ನು ನೀಡಬೇಕು. ನಾವು ಸಮಾಜದಲ್ಲಿ ಜಾತಿ, ಧರ್ಮ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಉತ್ತೇಜಿಸುವುದಿಲ್ಲ ಎಂದರು.

 

 

Leave a Reply

Your email address will not be published. Required fields are marked *