ಢಾಕಾ: ಕಳೆದ 14 ವರ್ಷಗಳಿಂದಲೂ ಅಧಿಕಾರದಿಂದ ಹೊರಗುಳಿದಿದ್ದ ಬಾಂಗ್ಲಾದೇಶ ನ್ಯಾಷನಲಿಷ್ಟ್ (BNP) ಕಳೆದುಕೊಂಡ ಹಕ್ಕುಗಳ ಮರುಸ್ಥಾಪನೆಗಾಗಿ ಬೃಹತ್ ಪ್ರತಿಭಟನಾ ರ‍್ಯಾಲಿ (Protest Rally) ಹಮ್ಮಿಕೊಂಡಿದೆ. ಸಾರ್ವತ್ರಿಕ ಚುನಾವಣೆಗೂ (Bangladesh General Election) ಮುನ್ನವೇ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸಾವಿರಾರು ಬಿಎನ್‌ಪಿ ಕಾರ್ಯಕರ್ತರು ರ‍್ಯಾಲಿಗೆ ಧುಮುಕಿದ್ದು, ಪ್ರತಿಭಟನಾ ರ‍್ಯಾಲಿ ಹಿಂಸಾತ್ಮಕರೂಪ ಪಡೆದಿದೆ.
Advertisement
ಕೊಲೆ, ಕೋಮು ಗಲಭೆಗಳಿಂದ ರಕ್ಷಣೆ, ಸಂವಿಧಾನ (Constitution) ಸುಧಾರಣಾ ಆಯೋಗ ರಚಿಸುವುದು ಹಾಗೂ ಪತ್ರಕರ್ತರ (Journalist) ಹತ್ಯೆ, ಪತ್ರಕರ್ತರ ಮೇಲಿನ ಚಿತ್ರಹಿಂಸೆ ಕುರಿತು ತನಿಖೆ ನಡೆಸಲು ಆಯೋಗ ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಬಿಎನ್‌ಪಿ ಬೃಹತ್ ರ‍್ಯಾಲಿ ಕೈಗೊಂಡಿದೆ. ಇದನ್ನೂ ಓದಿ: 2ನೇ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಾಣಕ್ಕೆ ತಯಾರಿ ಶುರು – ಮೈಲಿಗಲ್ಲಿನತ್ತ ಭಾರತ
Advertisement
ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಸರ್ಕಾರ ಕಾನೂನು ವ್ಯವಸ್ಥೆ ಕಾಪಾಡಲು ರಾಜಧಾನಿ ಢಾಕಾದಾದ್ಯಂತ ಬಿಗಿ ಭದ್ರತೆ ಕಲ್ಪಿಸಿದೆ. 4 ಸಾವಿರ ಸೈನಿಕರೂ ಸೇರಿದಂತೆ ವಿವಿಧ ವಲಯಗಳ 30 ಸಾವಿರ ಭದ್ರತಾ ಸಿಬ್ಬಂದಿಯನ್ನ ನೇಮಕ ಮಾಡಿದೆ. ಪ್ರತಿಭಟನಾ ರ‍್ಯಾಲಿ ನಡೆಯುವ ಸ್ಥಳಕ್ಕೆ ಸಮೀಪವಿರುವ ಖಾಲಿ ಮೈದಾನಗಳಲ್ಲಿ ಸೇನಾಪಡೆಗಳು ಬೀಡುಬಿಟ್ಟಿವೆ. ಹಿಂಸಾಚಾರ ತಡೆಗಟ್ಟಲು ಆರ್‌ಎಬಿ ಚಾಪರ್ ಸಹ ಬಳಸಿಕೊಂಡಿದ್ದು, ನಗರವನ್ನು ಸುತ್ತುವರಿದಿವೆ.
Advertisement
Advertisement
ಇತ್ತೀಚೆಗಷ್ಟೇ ಬಿಎನ್‌ಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಬಿಎನ್‌ಪಿ ಪ್ರಭಾವಿ ಮುಖಂಡ ಮಕ್ಬುಲ್ ಹುಸೇನ್ ಸಾವನ್ನಪ್ಪಿದರು. ಬಳಿಕ 1 ಸಾವಿರ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಆ ನಂತರ ಪ್ರತಿಭಟನೆ ಭುಗಿಲೆದ್ದಿದೆ. ಇದನ್ನೂ ಓದಿ: ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ
ಒತ್ತಾಯಗಳೇನು?: ಬಾಂಗ್ಲಾದೇಶದ ಜನ ಕಳೆದುಕೊಂಡ ತಮ್ಮ ಹಕ್ಕುಗಳನ್ನು ಮರುಸ್ಥಾಪಿಸಲು ಬಿಎನ್‌ಪಿ ಹೋರಾಟಕ್ಕಿಳಿದಿದೆ. ಸರ್ಕಾರಿ ವ್ಯವಸ್ಥೆಯನ್ನು ಸಾಂವಿಧಾನೀಕರಣಗೊಳಿಸುವುದು. ಡಿಜಿಟಲ್ ಭದ್ರತಾ ಕಾಯ್ದೆಯನ್ನು ರದ್ದುಪಡಿಸುವುದು. ವಿದ್ಯುತ್, ಇಂಧನ ಹಾಗೂ ಇತರ ದೈನಂದಿನ ಅಗತ್ಯವಸ್ತುಗಳ ಬೆಲೆಯನ್ನು ಇಳಿಕೆ ಮಾಡುವುದು. ಮನಿ ಲಾಂಡರಿಗ್ ತಡೆಗಟ್ಟಲು ಆಯೋಗ ರಚನೆ ಮಾಡುವುದು, ನಾಪತ್ತೆ, ಕೊಲೆ ಪ್ರಕರಣಗಳಿಂದ ಬಲಿಪಶುಗಳಾದವರ ಕೌಶಲ ವಿಚಾರಿಸುವುದು, ರಾಜ್ಯ ಹಾಗೂ ರಾಷ್ಟ್ರೀಯ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು.
ವಿವಾದಾತ್ಮಕ ತಿದ್ದುಪಡಿಗಳನ್ನ ರದ್ದುಗೊಳಿಸಲು ಸಂವಿಧಾನ ಸುಧಾರಣಾ ಆಯೋಗ ರಚಿಸುವುದು. ಸರ್ಕಾರದ ಚುನಾವಣಾ ವ್ಯವಸ್ಥೆಯನ್ನು ಮರುಸ್ಥಾಪಿಸುವುದು. ಚುನಾವಣಾ ಆಯೋಗದ ನೇಮಕಾತಿ ಕಾಯ್ದೆಯನ್ನು ರದ್ದುಗೊಳಿಸುವುದು, ನ್ಯಾಯ ಮಂಡಳಿ ರಚನೆ, ಆಡಳಿತ ಸುಧಾರಣಾ ಆಯೋಗ ರಚನೆ, ಪತ್ರಕರ್ತರ ಹತ್ಯೆ ಮತ್ತು ಚಿತ್ರಹಿಂಸೆ ಕುರಿತು ತನಿಖೆ ನಡೆಸಲು ಮಾಧ್ಯಮ ಆಯೋಗ ರಚಿಸುವುದು, ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಆಯೋಗ ರಚನೆ ಮಾಡುವುದು ಪ್ರಮುಖ ಒತ್ತಾಯಗಳಾಗಿವೆ.