ಬೆಂಗಳೂರು: ಬಿಜೆಪಿ ಮತ್ತು ಅವರ ಐಟಿ ಸೆಲ್ ಸುಳ್ಳು ಹೇಳುವುದರಲ್ಲಿ, ಸತ್ಯ ತಿರುಚುವುದರಲ್ಲಿ ಪರಿಣಿತರು. ಶಿಕ್ಷಣ, ಬೌದ್ಧಿಕತೆಯಲ್ಲಿ ಕರಾವಳಿ ದೇಶಕ್ಕೇ ಮಾದರಿ ಎಂಬ ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಟ್ವೀಟ್: ಸುಳ್ಳು ಹೇಳುವುದರಲ್ಲಿ, ಸತ್ಯವನ್ನು ತಿರುಚುವುದರಲ್ಲಿ ಬಿಜೆಪಿ ಮತ್ತು ಅವರ ಐಟಿಸೆಲ್ ಮೀರಿಸಲು ಯಾರಿಗೂ ಸಾಧ್ಯವಿಲ್ಲ. ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾನು ಕರಾವಳಿಯ ಜನತೆ ಬುದ್ದಿವಂತರಲ್ಲ ಎಂದು ಹೇಳಿಲ್ಲ. ಶಿಕ್ಷಣ, ಬೌದ್ಧಿಕತೆಯಲ್ಲಿ ಕರಾವಳಿ ದೇಶಕ್ಕೇ ಮಾದರಿ. ಬಿಜೆಪಿ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ.
Advertisement
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಮುಖಂಡ ಸಿ.ಟಿ.ರವಿ, ಮುಖ್ಯಮಂತ್ರಿಗಳ ಈ ರೀತಿಯ ಹೇಳಿಕೆಗಳು ಕರಾವಳಿ ಜನರ ಭಾವನೆಗಳಿಗೆ ಧಕ್ಕೆ ತರುತ್ತವೆ. ಇಂತಹ ಸಣ್ಣ ಮನಸ್ಸಿನ ನಾಯಕರು ನಮ್ಮ ರಾಜ್ಯವನ್ನು ಆಳುತ್ತಿರೋದು ದುರಂತ. ನೀವು ಕೇವಲ ಜೆಡಿಎಸ್ ನಾಯಕರಾಗಿಲ್ಲ, ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಕುಮಾರಸ್ವಾಮಿ ಅವರು ನೆನಪು ಮಾಡಿಕೊಳ್ಳಬೇಕಿದೆ. ಈ ಖಾಸಗಿ ಪಕ್ಷ ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು .
Advertisement
This comment from CM @hd_kumaraswamy amounts to insulting People of Coastal Karnataka. Its a tragedy that a petty minded person is ruling Our State.
HDK must realize that he is the State's CM & not just a leader of JD (S), the private limited Party that exists in few districts. https://t.co/n3i8u3S2pO
— C T Ravi ???????? ಸಿ ಟಿ ರವಿ (@CTRavi_BJP) March 19, 2019
Advertisement
ಸಿಎಂ ಹೇಳಿದ್ದೇನು..?
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿಎಂ, ಉಡುಪಿ, ಕಾರ್ಕಳ ಕಾಪು ಸೇರಿದಂತೆ ಕರಾವಳಿ ಭಾಗದ ಜನರಿಗೆ ತಿಳುವಳಿಕೆ ಇಲ್ಲ. ಅಲ್ಲಿಯ ಜನ ಬಿಜೆಪಿಗೆ ಮಾತ್ರ ವೋಟ್ ಹಾಕ್ತಾರೆ. ಬಿಜೆಪಿಯನ್ನು ಗೆಲ್ಲಿಸುವ ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳದ ಜನರಿಗೆ ಶಾಲೆ ಕಾಲೇಜು ಕಟ್ಟಿಸಿಕೊಡಲು ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕಿಚಾಯಿಸಿದ್ದರು.
Advertisement
ಕರಾವಳಿ ಜನ ಗರಂ: ತಿಳುವಳಿಕೆ ಇರೋದಕ್ಕೆ ನಾವು ಕುಟುಂಬ ರಾಜಕಾರದ ಹಿಂದೆ ಬಿದ್ದಿಲ್ಲ. ಹಿಂದೆ ಸಿಎಂ ಆಗಿದ್ದಾಗ ಎಷ್ಟು ಕೊಟ್ಟಿದ್ದೀರಿ, ಈ ಬಜೆಟ್ ಮಂಡನೆ ಸಂದರ್ಭ ಕೊಟ್ಟದ್ದೆಷ್ಟು ಗೊತ್ತಿದೆ. ತಿಳುವಳಿಕೆ ಇದ್ದದ್ದಕ್ಕೆ ಬಿಜೆಪಿಗೆ ವೋಟ್ ಹಾಕ್ತೇವೆ. ನಮಗೆ ತಿಳುವಳಿಕೆ ಇದೆ. ಕುಟುಂಬ ರಾಜಕಾರಣಕ್ಕೆ ನಾವು ವೋಟ್ ಹಾಕಲ್ಲ ಎಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಸುಳ್ಳು ಹೇಳುವುದರಲ್ಲಿ, ಸತ್ಯವನ್ನು ತಿರುಚುವುದರಲ್ಲಿ #bjp ಮತ್ತು ಅವರ ಐಟಿಸೆಲ್ ಮೀರಿಸಲು ಯಾರಿಗೂ ಸಾಧ್ಯವಿಲ್ಲ.ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ನಾನು ಕರಾವಳಿಯ ಜನತೆ ಬುದ್ದಿವಂತರಲ್ಲ ಎಂದು ಹೇಳಿಲ್ಲ.ಶಿಕ್ಷಣದಲ್ಲಿ, ಬೌದ್ಧಿಕತೆಯಲ್ಲಿ ಕರಾವಳಿ ದೇಶಕ್ಕೇ ಮಾದರಿ. ಬಿಜೆಪಿ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 20, 2019