ದಿಸ್ಪುರ್: ಐವರು ವಿಚಾರಣಾಧೀನ ಕೈದಿಗಳು ಸೇರಿ ಜೈಲಿನ ಕಂಬಿಗಳನ್ನು ಮುರಿದು, ಬೆಡ್‌ಶೀಟ್‌ಗಳು ಮತ್ತು ಲುಂಗಿಗಳನ್ನು ಬಳಸಿ 20 ಅಡಿ ಕಾಂಪೌಂಡ್‌ನ್ನು ಇಳಿದು ಪರಾರಿಯಾದ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ.
ಜೈಲಿಂದ ತಪ್ಪಿಸಿಕೊಂಡ ಕೈದಿಗಳನ್ನು ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ 1 ರಿಂದ 2 ಗಂಟೆಯ ವೇಲೆ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾರೆ. ಬ್ಯಾರಕ್‌ಗಳ ರಾಡ್‌ಗಳನ್ನು ಮುರಿದು ಬಳಿಕ 20 ಅಡಿ ಕಾಂಪೌಂಡ್ ಇಳಿಯಲು ಕಂಬಳಿ, ಲುಂಗಿ ಮತ್ತು ಬೆಡ್‌ಶೀಟ್‌ಗಳನ್ನು ಬಳಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಐವರು ಪೋಕ್ಸೊ (POCSO) ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದರು. ಪರಾರಿಯಾದವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಬಗ್ಗೆ ಕೆಲವು ಜೈಲಲ್ಲಿರುವ ಕೈದಿಗಳನ್ನು ವಿಚಾರಣೆ ಮಾಡುತ್ತೇವೆ. ತನಿಖೆಯಲ್ಲಿ ಎಲ್ಲವೂ ಹೊರಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕೈದಿಗಳು ಸೋನಿತ್‌ಪುರ ಜಿಲ್ಲೆಯ ತೇಜ್‌ಪುರ ಮತ್ತು ಮೊರಿಗಾಂವ್ ಜಿಲ್ಲೆಯ ಲಾಹೋರಿಘಾಟ್ ಮತ್ತು ಮೊಯಿರಾಬರಿ ನಿವಾಸಿಗಳು ಎಂದು ಮೊರಿಗಾಂವ್ ಜಿಲ್ಲಾಧಿಕಾರಿ ದೇವಾಶಿಸ್ ಶರ್ಮಾ ತಿಳಿಸಿದ್ದಾರೆ.
Advertisement
ಈ ಸಂಬಂಧ ಜೈಲರ್ ಪ್ರಶಾಂತ ಸೈಕಿಯಾ ಅವರನ್ನು ಅಮಾನತುಗೊಳಿಸಲಾಗಿದೆ. ಗುವಾಹಟಿಯ ಇಬ್ಬರು ಸಹಾಯಕ ಜೈಲರ್‌ಗಳನ್ನು ಜೈಲಿನ ನಿರ್ವಹಣೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.