ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಪೆಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಪೆಟ್ರೋಲ್ ಬೆಲೆ ಬರೋಬ್ಬರಿ 420 ರೂ. ಹಾಗೂ ಡೀಸೆಲ್ ಬೆಲೆ 400 ರೂ. ತಲುಪಿದೆ.
ಶ್ರೀಲಂಕಾ ಸರ್ಕಾರ, ಪೆಟ್ರೋಲ್ ಬೆಲೆ ಶೇಕಡಾ 24.3 ಮತ್ತು ಡೀಸೆಲ್ ಬೆಲೆ ಶೇಕಡಾ 38.4 ರಷ್ಟು ಹೆಚ್ಚಿಸಿದೆ. ಅಗತ್ಯ ವಸ್ತುಗಳ ಖರೀದಿಗೆ ವಿದೇಶಿ ಕರೆನ್ಸಿ ಕೊರತೆ ಕಾರಣದಿಂದಾಗಿ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಣಾಮವಾಗಿ ಇಂಧನ ಬೆಲೆಯಲ್ಲೂ ದಾಖಲೆಯ ಏರಿಕೆಯಾಗಿದೆ. ಇದನ್ನೂ ಓದಿ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ
ಏಪ್ರಿಲ್ 19 ರಿಂದ ಎರಡನೇ ಬಾರಿಗೆ ಇಂಧನ ಬೆಲೆ ಏರಿಕೆಯಾಗಿತ್ತು. ಈಗ ಹೆಚ್ಚು ಬಳಕೆಯಾಗುವ ಆಕ್ಟೇನ್ 92 ಪೆಟ್ರೋಲ್ ಬೆಲೆ 420 ರೂ. (1.17 ಡಾಲರ್) ಮತ್ತು ಡೀಸೆಲ್ 400 ರೂ. (1.11 ಡಾಲರ್) ಲೀಟರ್‌ಗೆ ಸಾರ್ವಕಾಲಿಕ ಗರಿಷ್ಠ ತಲುಪಿದೆ.
ಆಕ್ಟೇನ್ 92 ಪೆಟ್ರೋಲ್ ಪ್ರತಿ ಲೀಟರ್‌ಗೆ ಶೇಕಡಾ 24.3 (82 ರೂ.) ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ ಶೇಕಡಾ 38.4 (111 ರೂ.) ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಇಂಧನ ಘಟಕವಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ತೆಗೆದುಕೊಂಡಿದೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ
ಇಂದು ಮುಂಜಾನೆ 3 ಗಂಟೆಯಿಂದ ಇಂಧನ ಬೆಲೆ ಪರಿಷ್ಕರಣೆಯಾಗಲಿದ್ದು, ಕ್ಯಾಬಿನೆಟ್ ಅನುಮೋದಿಸಿದ ಇಂಧನ ಬೆಲೆ ಸೂತ್ರವನ್ನು ಬೆಲೆಗಳನ್ನು ಪರಿಷ್ಕರಿಸಲು ಅನ್ವಯಿಸಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸ್ಕರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅದಕ್ಕೆ ಅನುಗುಣವಾಗಿ ಸಾರಿಗೆ ಮತ್ತು ಇತರ ಸೇವಾ ಶುಲ್ಕಗಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸೂತ್ರವನ್ನು ಪ್ರತಿ ಹದಿನೈದು ದಿನಗಳು ಅಥವಾ ತಿಂಗಳಿಗೊಮ್ಮೆ ಅನ್ವಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.