ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಡೆತ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್ ಇದ್ರೆ ಸಾಕು ಪ್ರಧಾನಿ, ಪಕ್ಷದ ಅಧ್ಯಕ್ಷ ಆಗಬಹುದು ಎಂದು ನಟಿ, ವಿಧಾನ ಪರೀಷತ್ ಸದಸ್ಯೆ ತಾರಾ ಹೇಳಿದ್ದಾರೆ.
ಬೆಳಗಾವಿ ಮಿಲೇನಿಯಮ್ ಗಾರ್ಡನ್ ನಲ್ಲಿ ಎಬಿವಿಪಿ ಏರ್ಪಡಿಸಿದ್ದ ರಂಗ್‍ದೇ ಬಸಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ. ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ನಂತರ ಇಂದಿರಾ ಗಾಂಧಿಯಿಂದ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಸಹ ಪ್ರಧಾನಿಯಾಗಿದ್ದರು. ರಾಜೀವ್ ಗಾಂಧಿಯ ಡೆತ್ ಸರ್ಟಿಫಿಕೇಟ್ ಪಡೆದು ಸೊನಿಯಾ ಗಾಂಧಿ ಸಹ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದೀಗ ಸೋನಿಯಾ ಗಾಂಧಿಯಿಂದ ಬರ್ತ್ ಸರ್ಟಿಫಿಕೇಟ್ ಪಡೆದ ರಾಹುಲ್ ಸಹ ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ ಅಂದ್ರು.
ಆದರೆ ಈ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿ ಇಲ್ಲ. ಇಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ದೇಶದ ಪ್ರಧಾನಿ ಆಗಬಹುದು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಧರ್ಮ ಒಡೆಯುವ ಸಂಸ್ಕೃತಿ ಆರಂಭವಾಗಿದ್ದು, ಇದರ ವಿರುದ್ಧ ಎಬಿವಿಪಿ ಜಾಗೃತಿ ಮೂಡುವ ಅವಶ್ಯಕತೆ ಇದೆ ಎಂದು ತಾರಾ ಕರೆ ನೀಡಿದ್ರು.