ಭೋಪಾಲ್: ಪ್ರತಿಭಟನಾಕಾರರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೆರಳುತ್ತಿದ್ದ ವಾಹನದ ಎದುರು ಕಪ್ಪು ಧ್ವಜವನ್ನು ತೋರಿಸಿ ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ.
ಈ ಘಟನೆ ಸಿದ್ಧಿ ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣೆಗೂ ಮುನ್ನವೇ ಪ್ರಯಾಣಿಸುತ್ತಿದ್ದ ವೇಳೆ ನಡೆದಿದೆ. ಘಟನೆಯಲ್ಲಿ ಚೌಹಾಣ್ ಗಾಯಗೊಂಡಿದ್ದಾರೆ ಎಂದು ಚುರ್ಹತ್‍ನ ಪೊಲೀಸ್ ಇನ್ಸ್‌ಪೆಕ್ಟರ್ ರಾಮ್ ಬಾಬು ಚೌಧರಿ ಅವರು ದೂರವಾಣಿ ಮೂಲಕ ರಾಷ್ಟ್ರೀಯ ಸುದ್ದಿಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಜಿಲ್ಲಾ ಕ್ಷೇತ್ರದಿಂದ 25 ಕಿ.ಮೀ ದೂರವಿರುವ ಚುರ್ಹತ್ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಅದು ಪ್ರತಿಪಕ್ಷ ನಾಯಕ ಅಜಯ್ ಸಿಂಗ್ ನ ವಿಧಾನಸಭೆ ಕ್ಷೇತ್ರವಾಗಿದೆ ಎಂದು ಮಧ್ಯಪ್ರದೇಶದ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಹೇಳಿದ್ದಾರೆ.
Advertisement
Advertisement
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಜಯ್ ಸಿಂಗ್ ಅವರೊಂದಿಗೆ ನೇರವಾಗಿ ಹೋರಾಟಕ್ಕೆ ಇಳಿಯುತ್ತೇನೆ. ಅಜಯ್ ಸಿಂಗ್ ನಿನಗೆ ಧೈರ್ಯವಿದ್ದರೆ ಮುಖಾಮುಖಿ ಹೋರಾಡೋಣ. ನಾನು ದೈಹಿಕವಾಗಿ ದುರ್ಬಲನಾಗಿರಬಹುದು ಆದರೆ ನಿಮ್ಮ ಕಾರ್ಯಗಳಿಂದ ನನ್ನನ್ನು ತಳ್ಳಿಹಾಕಲು ಸಾಧ್ಯವಾಗುವುದಿಲ್ಲ ಎಂದರು.
Advertisement
ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾನಾಡಿದ ಅಜಯ್ ಸಿಂಗ್, ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿಲ್ಲ. ತನ್ನ ಪಕ್ಷ ಹಿಂಸೆ ಸಂಸ್ಕೃತಿಯನ್ನು ಅನುಸರಿಸುವುದಿಲ್ಲ. ನನ್ನ ಹಾಗೂ ಚುರ್ಹಾತ್‍ನ ಜನರ ನಡುವೆ ಇರುವ ಒಳ್ಳೆಯ ಸಂಪರ್ಕವನ್ನು ಕೆಡಿಸಲು ಈ ರೀತಿಯ ಪಿತೂರಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಅಂತ ಹೇಳಿದ್ದಾರೆ.
#WATCH: Black flags shown to Madhya Pradesh Chief Minister Shivraj Singh Chouhan & stones hurled at his vehicle in Sidhi during Jan Ashirwad Yatra. (02.09.18) pic.twitter.com/OVHoPVy7Hx
— ANI (@ANI) September 3, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv