Connect with us

ಬಜೆಟ್‍ನಲ್ಲಿ ವಿಶ್ವದ ಅತೀ ದೊಡ್ಡ ಆರೋಗ್ಯ ಸಂರಕ್ಷಣಾ ಯೋಜನೆ ಘೋಷಿಸಿದ ಜೇಟ್ಲಿ

ಬಜೆಟ್‍ನಲ್ಲಿ ವಿಶ್ವದ ಅತೀ ದೊಡ್ಡ ಆರೋಗ್ಯ ಸಂರಕ್ಷಣಾ ಯೋಜನೆ ಘೋಷಿಸಿದ ಜೇಟ್ಲಿ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು 2018ರ ಕೇಂದ್ರ ಬಜೆಟ್ ನಲ್ಲಿ 10 ಕೋಟಿ ಕುಟುಂಬಗಳನ್ನ ಒಳಗೊಂಡ ವಿಶ್ವದ ಅತೀ ದೊಡ್ಡ ಆರೋಗ್ಯ ಸಂರಕ್ಷಣಾ ಯೋಜನೆಯನ್ನ ಘೋಷಣೆ ಮಾಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯಡಿ ಬರುವ ಪ್ರತಿ ಕುಟುಂಬಕ್ಕೂ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಛಕ್ಕಾಗಿ ವೈದ್ಯಕೀಯ ಮರುಪಾವತಿಯಾಗಿ ಪ್ರತಿ ವರ್ಷ ಗರಿಷ್ಠ 5 ಲಕ್ಷ ರೂ. ಸಿಗಲಿದೆ. ಇದು ವಿಶ್ವದ ಅತೀ ದೊಡ್ಡ ಸರ್ಕಾರಿ ಅನುದಾನಿತ ಆರೋಗ್ಯ ಸಂರಕ್ಷಣಾ ಯೋಜನೆ- ಆಯುಶ್ಮಾನ್ ಭಾರತ್ ಯೋಜನೆ ಎಂದು ಜೇಟ್ಲಿ ಹೇಳಿದ್ರು

ಈ ಬಗ್ಗೆ ಘೋಷಣೆ ಮಾಡಿದ ಸಚಿವ ಜೇಟ್ಲಿ, ಆಸ್ಪತ್ರೆ ಸೇರುವಿಕೆಯಿಂದ ಜನ ದುರ್ಬಲರಾಗುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಯಸಿತ್ತು ಎಂದು ಹೇಳಿದರು.

ಜೇಟ್ಲಿ ಈ ಯೋಜನೆಯನ್ನ ಘೋಷಣೆ ಮಾಡುತ್ತಿದ್ದಂತೆ ಲೋಕಸಭೆಯಲ್ಲಿ ಟೇಬಲ್ ಬಡಿಯುವುದರ ಮೂಲಕ ಶ್ಲಾಘನೆ ವ್ಯಕ್ತವಾಯ್ತು. ಈ ಯೋಜನೆ 50 ಕೋಟಿ ಜನರಿಗೆ ನೆರವಾಗಲಿದೆ. ಅಂದ್ರೆ ದೇಶದ ಶೇ.40 ರಷ್ಟು ಜನಸಂಖ್ಯೆ ಇದರ ಲಾಭ ಪಡೆಯಲಿದ್ದಾರೆ. ಈ ಹಿಂದೆಯೂ ಸರ್ಕಾರ ಬಡವರಿಗಾಗಿ ಇದೇ ರೀತಿಯ ಆರೋಗ್ಯ ರಕ್ಷಣಾ ಯೋಜನೆಯನ್ನ ತಂದಿತ್ತು. ಆದ್ರೆ ಮರುಪಾವತಿ 30 ಸಾವಿರ ರೂ. ಗೆ ಸೀಮಿತವಾಗಿತ್ತು.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಈ ಹಿಂದೆ ತನ್ನ ಅಧಿಕಾರಾವಧಿಯಲ್ಲಿ ಒಬಾಮಾ ಕೇರ್ ಎಂಬ ಹೆಸರಿನಲ್ಲಿ ಇದೇ ರೀತಿಯ ಆರೋಗ್ಯ ವಿಮಾ ಯೋಜನೆಯನ್ನ ಪರಿಚಯಿಸಿದ್ದರು.

Advertisement
Advertisement