ನವದೆಹಲಿ: ಸಂಪ್ರದಾಯ ಮುರಿದು ಇದೇ ಮೊದಲ ಬಾರಿಗೆ ಸೂರ್ಯಾಸ್ತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ.
ಗುರು ತೇಗ್ ಬಹಾದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 9:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಕೆಂಪು ಕೋಟೆಯ ಮೇಲೆ ಭಾಷಣ ಮಾಡದೇ ಹುಲ್ಲುಹಾಸಿನ ಮೇಲೆ ಮಾತನಾಡುತ್ತಿರುವುದು ಇಂದಿನ ಕಾರ್ಯಕ್ರಮದ ವಿಶೇಷ.
Advertisement
Advertisement
1675ರಲ್ಲಿ ಸಿಖ್ ಸಮುದಾಯದ 9ನೇ ಗುರು ಗುರು ತೇಗ್ ಬಹದ್ದೂರ್ ಕೊಲ್ಲಲು ಮೊಘಲ್ ದೊರೆ ಔರಂಗಜೇಬ್ ಆದೇಶ ನೀಡಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಶಾಂತಿ ಮೂಡಿಸುವ ಬಗ್ಗೆ ಭಾಷಣವಿರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: WHO ಮುಖ್ಯಸ್ಥರಿಗೆ ʼತುಳಸಿಭಾಯ್ʼ ಎಂದು ಗುಜರಾತಿ ಹೆಸರಿಟ್ಟ ಮೋದಿ
Advertisement
ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ಕೆಂಪುಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ. ಸ್ವಾತಂತ್ರ್ಯ ದಿನ ಹೊರತು ಪಡಿಸಿ ಎರಡನೇ ಬಾರಿಗೆ ದಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಿದ್ದಾರೆ.
Advertisement
2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಸರ್ಕಾರ ರಚನೆಯ 75ನೇ ವರ್ಷಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದ ಮೋದಿ ಬೆಳಗ್ಗೆ 9 ಗಂಟೆಗೆ ಭಾಷಣ ಮಾಡಿದ್ದರು.
ಇಂದು ರಾತ್ರಿ 400 ಸಿಖ್ ಸಂಗೀತಗಾರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೋದಿ ಅವರು ಅಂಚೆ ಸ್ಟಾಂಪ್ ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ
ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 11 ಮುಖ್ಯಮಂತ್ರಿಗಳು ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಸಿಖ್ ಪ್ರಮುಖರು ಭಾಗಿಯಾಗಲಿದ್ದಾರೆ. 400 ಸಿಖ್ ಜಥೆದಾರ್ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.