ಪಾಟ್ನಾ: ಮೆದುಳಿನ ತೀವ್ರ ಉರಿಯೂತ ಕಾಯಿಲೆ ಅಥವಾ ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್‍ಗೆ(ಎಇಎಸ್) ಬಿಹಾರ ತತ್ತರಿಸಿ ಹೋಗಿದ್ದು, ಇದುವರೆಗೆ ಸುಮಾರು 128 ಮಕ್ಕಳು ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ. ಹೀಗಾಗಿ ಎಇಎಸ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಪಾಟ್ನಾದಲ್ಲಿ ಜನ ಅಧಿಕಾರ ಛತ್ರ ಪರಿಷತ್ ಸದಸ್ಯರು ಶುಕ್ರವಾರದಂದು ಶೂ ಪಾಲಿಶ್ ಮಾಡಿ ಹಣ ಸಂಗ್ರಹಿಸಿದ್ದಾರೆ.
ಎಇಎಸ್‍ಯಿಂದ ಮೃತಪಡುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಈ ಮಧ್ಯೆ ದೇಶಾದ್ಯಂತ ಯೋಗ ದಿನಾಚರಣೆಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗುತ್ತದೆ. ಆದರೆ ನಾವು ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಶೂ ಪಾಲೀಶ್ ಮಾಡಿ ಹಣ ಸಂಗ್ರಹಿಸುತ್ತಿದ್ದೇವೆ ಎಂದು ಜನ ಅಧಿಕಾರ ಛತ್ರ ಪರಿಷತ್ ಸದಸ್ಯರು ಹೇಳಿದರು.
Advertisement
Advertisement
ಒಂದೆಡೆ ದೇಶಾದ್ಯಂತ ಯೋಗ ದಿನಾಚರಣೆಗೆ ಕೋಟಿಗಟ್ಟಲೆ ಖರ್ಚು ಮಾಡಲಾಗುತ್ತಿದೆ. ಮತ್ತೊಂದೆಡೆ ಮುಜಾಫರ್‌ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳು, ಔಷಧಿ, ವಿದ್ಯುತ್ ಅಥವಾ ಸರಿಯಾದ ಮೂಲಭೂ ಸೌಕರ್ಯ ಸೌಲಭ್ಯಗಳಿಲ್ಲ. ಬಿಹಾರದಲ್ಲಿ ಎಇಎಸ್‍ಗೆ ಬಲಿಯಾದ ಮಕ್ಕಳ ಕುಟುಂಬಗಳಿಗೆ ಇದು ಕಪ್ಪು ದಿನವಾಗಿ ಪರಿಣಮಿಸಿದೆ. ಜನರ ಬಗ್ಗೆ ಯೋಚಿಸದೆ ರಾಜಕಾರಣಿಗಳು ತಮ್ಮನ್ನು ತಾವು ಬ್ರ್ಯಾಂಡಿಂಗ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ನಾವು ಶೂಗಳನ್ನು ಪಾಲಿಶ್ ಮಾಡಿ, ಅದರಿಂದ ಬಂದ ಹಣವನ್ನು ಮಕ್ಕಳ ಚಿಕಿತ್ಸೆಗಾಗಿ ನೀಡುತ್ತಿದ್ದೇವೆ ಎಂದು ಜನ ಅಧಿಕಾರ ಛತ್ರ ಪರಿಷತ್ ಉಪಾಧ್ಯಕ್ಷ ಮನೀಶ್ ಯಾದವ್ ತಿಳಿಸಿದರು.
Advertisement
Advertisement
ಅಧಿಕೃತ ಮಾಹಿತಿಯ ಪ್ರಕಾರ ಈವರೆಗೆ ಮುಜಾಫರ್‌ಪುರ ಜಿಲ್ಲೆಯಲ್ಲಿ ಎಇಎಸ್ 128 ಮಕ್ಕಳು ಸಾವನ್ನಪ್ಪಿದ್ದಾರೆ. ಸರ್ಕಾರಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿಯೇ (ಎಸ್‍ಕೆಎಂಸಿಎಚ್) 108 ಮಕ್ಕಳು ಅಸುನೀಗಿದ್ದಾರೆ. ಕಾಯಿಲೆಯಿಂದ ಜಿಲ್ಲೆಯ ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಕೊನೆಯುಸಿರೆಳೆದಿದ್ದಾರೆ .
Patna:'Jan Adhikar Chhatra Parishad' members polish shoes to collect money for children affected due to Acute Encephalitis Syndrome (AES).A member says,'Crores are being spent on Yoga day celebrations across the country,we'll collect the money&give it for children.'(21-06) #Bihar pic.twitter.com/iw2bxIyHwN
— ANI (@ANI) June 22, 2019
ಎಇಎಸ್ ಒಂದು ವೈರಸ್ ಕಾಯಿಲೆ. ವಿಪರೀತ ಜ್ವರ, ವಾಂತಿ, ಮೆದುಳು, ಹೃದಯ ಮತ್ತು ಮೂತ್ರಪಿಂಡದಲ್ಲಿ ಉರಿಯೂತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿವೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]