ಬೆಳಗಾವಿ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟನೆ ಹೊಗೆ ಆವರಿಸಿದ ಘಟನೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಖಾಸಗಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ನೌಕರ ವಿಶಾಲ್ ಪಾಟೀಲ್ ಎಂಬುವರಿಗೆ ಸೇರಿದ ಕಾರಿನಲ್ಲಿ ಇಂದು ಮುಂಜಾನೆ ಕೆಲಸದ ನಿಮಿತ್ತ ಆಫೀಸ್‍ಗೆ ತೆರಳುವ ವೇಳೆಯಲ್ಲಿ ಕಾರಿಗೆ ಬೆಂಕಿ ತಗುಲಿದೆ. ಇದನ್ನೂ ಓದಿ: 13ರ ಬಾಲಕನ ಮೇಲೆ ಪೊಲೀಸ್ ದರ್ಪ – ನಡು ರಸ್ತೆಯಲ್ಲಿ ಕಪಾಳಮೋಕ್ಷ ಮಾಡಿದ ವೀಡಿಯೋ ವೈರಲ್
Advertisement
Advertisement
ಬೆಂಕಿ ತಗಲುತ್ತಿದ್ದಂತೆ ಕಾರು ನಿಲ್ಲಿಸಿ ಚಾಲಕ ವಿಶಾಲ್ ಕಾರಿನಿಂದ ಹೊರ ಬಂದು ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಇನ್ನೂ ಚನ್ನಮ್ಮ ವೃತ್ತದಲ್ಲಿರುವ ಪೊಲೀಸರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ, ಪಿಯಸಿ ಎಕ್ಸಾಂ ಕೆಲಸ ಮಾಡೋ ಶಿಕ್ಷಕರಿಗೆ ಹಿಜಬ್ ನಿಷೇಧ
Advertisement
Advertisement
ಕಾರಿಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲ ಕಾಲ ಚನ್ನಮ್ಮ ವೃತ್ತದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.