– ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ 44,870 ಕೋಟಿ ರೂ. ಕೊಟ್ಟಿದ್ದಾರೆ: ಸಂಸದ
ಹಾವೇರಿ: ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು ಅಂತ ಜನರಿಗೆ ಗೊತ್ತಾಗಿದೆ. ಮನೆ ಮುರುಕರು ಯಾರು ಎಂದು ಜನ ತೀರ್ಮಾನ ಮಾಡುತ್ತಾರೆ. ಅವರೇ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraj Bommai), ಸಿದ್ದರಾಮಯ್ಯ (Siddaramaiah) ವಿರುದ್ಧ ಕಿಡಿಕಾರಿದ್ದಾರೆ.
Advertisement
ಹಾವೇರಿಯಲ್ಲಿ (Haveri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು (Congress) ಮೊದಲು ಬಜೆಟ್ ಪೂರ್ಣ ಪಾಠ ಓದಲಿ. ಯಾವ್ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ? ಅದೇ ಅಕೌಂಟ್‌ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಬಂದಿತ್ತು? ಕಾಂಗ್ರೆಸ್‌ನವರು ಜನರನ್ನು ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ. ಅನುದಾನ ಬಂದೇ ಇಲ್ಲ ಎನ್ನುತ್ತಾರೆ. 44,870 ಕೋಟಿ ರೂ.ಗಳನ್ನು ಡೆವಲ್ಯೂಷನ್ ಆಫ್ ಫಂಡ್‌ನಲ್ಲಿ ಕರ್ನಾಟಕಕ್ಕೆ ಕೊಟ್ಟಿದಾರೆ. ಈ ಬಗ್ಗೆ ಸೋಮವಾರ ಎಲ್ಲಾ ಮಾಹಿತಿ ಬಿಡುಗಡೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಮನಗೆ ನುಗ್ಗಿದ ಘಟಪ್ರಭಾ ನೀರು – ಹೃದಯಾಘಾತದಿಂದ ಮಾಲೀಕ ಸಾವು
Advertisement
Advertisement
ಕರ್ನಾಟಕದ ಪ್ರಗತಿಗೆ ಎಲ್ಲಾ ಕೊಟ್ಟಿದ್ದಾರೆ. ಇನ್ನಷ್ಟು ಕೊಡಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ಬಾಕಿ ಕೇಳಿದ್ದೇವೆ. ಕಾಂಗ್ರೆಸ್ ನವರು ಆಪಾದನೆ ಮಾಡಿಕೊಂಡು ಕೂತಿದ್ದಾರೆ. ಅನುದಾನ ಹರಿಯಲು ಪ್ರಾರಂಭ ಆಗಿದೆ. ಮುಡಾ ಹಗರಣದ ಕುರಿತು ಭಾನುವಾರ (ಜು.28) ಬಿಜೆಪಿ- ಜೆಡಿಎಸ್ ಸಭೆ ಇದೆ. ಸಭೆಯಲ್ಲಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಮುಡಾ ಹಗರಣದಲ್ಲಿ ತಪ್ಪಾಗಿಲ್ಲ ಅಂದರೆ ರಿಕವರಿ ಯಾಕೆ ಕೊಟ್ಟಿದ್ದಾರೆ? ತನಿಖೆಯಿಂದ ಎಲ್ಲಾ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೀತಿ ಆಯೋಗದ ಸಭೆಯಿಂದ ಮಧ್ಯದಲ್ಲೇ ಹೊರ ಬಂದ ಮಮತಾ ಬ್ಯಾನರ್ಜಿ
Advertisement