ಬೆಂಗಳೂರು: ಕಳೆದ ಒಂದು ವಾರದಿಂದ ಕೆಜಿ ರಸ್ತೆಯಲ್ಲಿರುವ ಕಂದಾಯ ಭವನ ಕಟ್ಟಡದಲ್ಲಿರುವ ಆಹಾರ ಇಲಾಖೆಯ ಕಚೇರಿಗೆ ಬೆಂಗಳೂರಿನ ಬೇರೆ ಬೇರೆ ಭಾಗದಿಂದ ಜನರು ಬರುತ್ತಿದ್ದಾರೆ. ಅನೇಕ ವರ್ಷಗಳಿಂದ ಇದ್ದ ಬಿಎಪಿಎಲ್ ಕಾರ್ಡ್ ( BPL Card) ಈ ತಿಂಗಳಿಂದ ರದ್ದಾಗಿದ್ದು, ಸಂದೇಶಗಳು ಬಂದಿವೆ.
ನಮ್ಮ ಕಾರ್ಡ್ ಯಾಕೇ ರದ್ದಾಗಿದೆ? ಕಾರಣವೇನು? ಸರ್ಕಾರ ನಮ್ಮನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಯಾಕೆ ಮಾಡಿದೆ? ಎಂದು ಪ್ರಶ್ನೆ ಮಾಡುತ್ತಿರುವ ಜನ ಆಹಾರ ಇಲಾಖೆಗೆ ದೌಡಾಯಿಸುತ್ತಿದ್ದಾರೆ. ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ
ಪ್ರಶ್ನೆ ಮಾಡುತ್ತಿರುವ ಜನರಿಗೆ ಆಹಾರ ಇಲಾಖೆ ( Department Of Food) ಹಾರಿಕೆ ಉತ್ತರ ಕೊಡುತ್ತಿದೆ. ಆದಾಯ ತೆರಿಗೆ, ಮತ್ತು ಜಿಎಸ್‌ಟಿ ಪೇ ಮಾಡಿದ್ದೀರಾ ಇದೇ ಕಾರಣಕ್ಕೆ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಆಧಾರದ ಮೇಲೆ ಬಿಪಿಎಲ್ ಕಾರ್ಡ್‌ಗಳನ್ನು ಪರೀಶೀಲನೆ ಮಾಡುತ್ತಿದ್ದು, ಆದಾಯ ಹೆಚ್ಚಾಗಿರುವವರ ಕಾರ್ಡ್ ರದ್ದು ಮಾಡುತ್ತಿದೆ. ಆದರೆ ಈ ತಾಂತ್ರಿಕ ಕೆಲಸ ಮಾಡುವಾಗ ಬಿಪಿಎಲ್ ಕಾರ್ಡ್ ಹೊಂದಿರುವ ಅನೇಕ ಅರ್ಹರಿಗೂ ಅನ್ಯಾಯ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ
ವಿಜಯಲಕ್ಷ್ಮಿ ಅನ್ನುವವರ ಕಾರ್ಡ್ ರದ್ದಾಗಿದೆ. ಆದರೆ ಅವರ ಪತಿ ನಮ್ಮ ಕುಟುಂಬದಲ್ಲಿರುವುದು ಮೂರೇ ಜನ ಇರುವುದು. ನಾವು ಯಾರು ಆದಾಯ ತೆರಿಗೆ ಕಟ್ಟಿಲ್ಲ. ಇದರ ಪುರಾವೆಯನ್ನು ಸಹ ನಾನು ಆಹಾರ ಇಲಾಖೆಗೆ ನೀಡಿದ್ದೇನೆ ಅನ್ನುತ್ತಿದ್ದಾರೆ. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ
ಯಶೋಧಾ ಅನ್ನುವವರ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿದೆ. ಮಗಳು ವಿಕಲಚೇತನೆ, ಕೋರಮಂಗಲದ ಆದಾಯ ಇಲಾಖೆಗೆ ತೆರಳಿ ಅಲ್ಲಿನ ಅಧಿಕಾರಿಗಳಿಂದ ನೋ ಟ್ಯಾಕ್ಸ್ಪೇ ಪತ್ರ ತಂದಿದ್ದಾರೆ. ಆದರೆ ಈಗಾಗಲೇ ಇವರ ಕಾರ್ಡ್ ರದ್ದಾಗಿದ್ದು ಮುಂದೇನು ಅಂತಿದ್ದಾರೆ.
ವಸಂತಕುಮಾರಿ ಅನ್ನುವವರ ಬಿಪಿಎಲ್ ಕಾರ್ಡ್ ಜಿಎಸ್‌ಟಿ ಕಾರಣದಿಂದ ರದ್ದಾಗಿದೆ. ಅದರೆ ಇವರ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ಜಿಎಸ್‌ಟಿ ರೇಕಾರ್ಡ್ ಇಲ್ಲ. ನಾವು ಈಗ ಏನು ಮಾಡೋದು ಅನ್ನುತ್ತಿದ್ದಾರೆ. ಇದನ್ನೂ ಓದಿ: ಕಾರವಾರ| ಗಾಂಜಾ ಜೊತೆ ನಿಷೇಧಿತ ಮಾದಕ ವಸ್ತು ವಶ; ನಾಲ್ವರ ಬಂಧನ
ಇಡೀ ಕುಟುಂಬ ವಾರ್ಷಿಕ ಆದಾಯ 1.20 ಲಕ್ಷಕಿಂತ ಕಡಿಮೆ ಇದ್ದರೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತೆ. ಅದರೆ ಇದಕ್ಕಿಂತ ಕಡಿಮೆ ಆದಾಯ ಇದ್ದರು ನಮ್ಮ ಕಾರ್ಡ್ ರದ್ದಾಗಿದೆ ಅನ್ನುವುದು ಕೆಲವರ ವಾದ. ಇನ್ನೂ ಈ ತಿಂಗಳ ರೇಷನ್ ಹಣ ಕೂಡ ಸರ್ಕಾರ ಖಾತೆಗೆ ಹಾಕಿದೆ. ಈಗ ರೇಷನ್ ಇಲ್ಲ ಅಂತಿದ್ದಾರಂತೆ. ಈ ಕೇಸ್‌ಗಳು ಕೇವಲ ಉದಾಹರಣೆ ಅಷ್ಟೇ, ನಿಜವಾಗಿಯೂ ಬಿಪಿಎಲ್ ಕಾರ್ಡ್ ಅಗತ್ಯ ಇದ್ದು ರದ್ದಾಗಿರುವವರ ಸಂಖ್ಯೆ ಹೆಚ್ಚಾಗಿದೆ. ಮತ್ತೆ ಕಾರ್ಡ್ ಸಿಗುತ್ತದೆ ಅನ್ನೋ ಭರವಸೆಯಲ್ಲಿ ಆಹಾರ ಇಲಾಖೆಗೆ ತಮ್ಮ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ರೈತರ ಆಸ್ತಿ ಒಂದಿಂಚೂ ಪಡೆದಿಲ್ಲ – ವಕ್ಫ್ ಆಸ್ತಿ ನಾವು ದಾಖಲಾತಿ ಮಾಡಿಕೊಂಡ್ರೆ ಏನು ತಪ್ಪು? – ಜಮೀರ್ ಪ್ರಶ್ನೆ