ನವದೆಹಲಿ: ಇಂದಿನಿಂದ ಸುಪ್ರೀಂ ಕೋರ್ಟ್(Supreme Court) ಸಾಂವಿಧಾನಿಕ ಪೀಠದಲ್ಲಿ(Constitution Bench) ನಡೆಯುವ ವಿಚಾರಣೆಯನ್ನು ಲೈವ್ ಆಗಿ ನೋಡಬಹುದು.
ಆರಂಭದಲ್ಲಿ NIC Webcast ಯೂಟ್ಯೂಬ್‌ನಲ್ಲಿ ಪ್ರಸಾರವಾದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲೇ ಲೈವ್ ಸ್ಟ್ರೀಮ್ ಪ್ರಸಾರವಾಗುವ ಸಾಧ್ಯತೆಯಿದೆ.
Advertisement
ಕಳೆದ ಮಂಗಳವಾರ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ (CJI Uday Lalit) ಅವರು ಜಡ್ಜ್‌ಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಜಡ್ಜ್‌ಗಳು ಲೈವ್ ಪ್ರಸಾರ ಅಗತ್ಯ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಭೆಯ ಬಳಿಕ ಲೈವ್ ಸ್ಟ್ರೀಮ್ ನಿರ್ಧಾರ ಪ್ರಕಟವಾಗಿತ್ತು.
Advertisement
ಈ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪ ಲೈವ್ ಆಗಿತ್ತು. ಸಿಜೆಐ ಆಗಿದ್ದ ಎನ್‌ವಿ ರಮಣ ಅವರ ನಿವೃತ್ತಿ ದಿನದ ಕಲಾಪವನ್ನು ಲೈವ್ ಮಾಡಲಾಗಿತ್ತು.
Advertisement
Advertisement
ಸೆಪ್ಟೆಂಬರ್ 2018 ರಲ್ಲಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನ್ಯಾಯವನ್ನು ಪಡೆಯುವ ಹಕ್ಕಿನ ಭಾಗವಾಗಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರಕ್ಕೆ ಅನುಮತಿ ನೀಡಿತ್ತು. ಬಳಿಕ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಇ-ಸಮಿತಿ, ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ನಿಯಂತ್ರಿಸಲು ಮಾದರಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಎರಡು ವಾರದ ಹಿಂದೆ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಸಾರ್ವಜನಿಕ ಮತ್ತು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ನಯನತಾರಾ ಮದುವೆ ವಿಡಿಯೋ ನೋಡ್ಬೇಕಾ, ಹಾಗಾದರೆ ದುಡ್ಡು ಕೊಡಲೇಬೇಕು
ಗುಜರಾತ್, ಒಡಿಶಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳ ಮೂಲಕ ತಮ್ಮ ವಿಚಾರಣೆಗಳನ್ನು ಈಗಾಗಲೇ ಲೈವ್-ಸ್ಟ್ರೀಮ್ ಮಾಡಿ ವಿಚಾರಣೆ ನಡೆಸಿವೆ.
ಲೈವ್‌ಸ್ಟ್ರೀಮ್ ಮಾಡುವುದರಿಂದ ವಕೀಲರಿಗೆ, ಪತ್ರಕರ್ತರಿಗೆ ಮತ್ತು ಆ ವಿಷಯದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಮಂದಿಗೆ ತುಂಬಾ ಸಹಾಯವಾಗಲಿದೆ.
ಸಾಂವಿಧಾನಿಕ ಪೀಠ
ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರುವ ಪೀಠವನ್ನು ಸಾಂವಿಧಾನಿಕ ಪೀಠ ಎಂದು ಕರೆಯಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಬಹುತೇಕ ಪ್ರಕರಣಗಳು ಇಬ್ಬರು ನ್ಯಾಯಾಧೀಶರು ಇರುವ ಪೀಠದಲ್ಲಿ ನಡೆಯುತ್ತದೆ. ಸಾಂವಿಧಾನಿಕ ಸಿಂಧುತ್ವ ಅಥವಾ ಯಾವುದಾದರು ಗಂಭೀರ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಸಾಂವಿಧಾನಿಕ ಪೀಠ ರಚನೆಯಾಗುತ್ತದೆ.