– ಸ್ಕಾಟ್ಲೆಂಡ್ ಪತಿ, ಬೆಂಗ್ಳೂರು ಪತ್ನಿಯ ಕೌಟುಂಬಿಕ ಕಲಹ ಪ್ರಕರಣ
– ವಾದವನ್ನು ಭಾಷಾಂತರಕ್ಕೆ ಅವಕಾಶ
ಬೆಂಗಳೂರು: ರಾಜ್ಯದ ಹೈಕೋರ್ಟ್‍ನಲ್ಲಿ (High Court) ದೇಶದ ಮೊದಲ ಶ್ರವಣ ದೋಷದ ವಕೀಲೆ ಸಾರಾ ಸನ್ನಿ (Sarah Sunny) ವಾದ ಮಂಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಕೌಟುಂಬಿಕ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ವಕೀಲೆ ಸಾರಾಸನ್ನಿ ವಾದ ಮಂಡಿಸಿದ್ದಾರೆ.
Advertisement
ಸ್ಕಾಟ್ಲೆಂಡ್ ಪೌರತ್ವ ಹೊಂದಿರುವ ಪತಿ ಹಾಗೂ ಬೆಂಗಳೂರಿನಲ್ಲಿರುವ ಪತ್ನಿ ನಡುವಿನ ವ್ಯಾಜ್ಯದ ಪ್ರಕರಣ ಇದಾಗಿದೆ. ಪತಿ ವಿರುದ್ಧ ಬಸವನಗುಡಿ ಪೊಲೀಸ್ (Basavanagudi Police) ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಲುಕ್‍ಔಟ್ ನೋಟಿಸ್ ಕೂಡಾ ಜಾರಿಯಾಗಿತ್ತು. ಇದನ್ನ ರದ್ದು ಪಡಿಸಲು ಹೈಕೋರ್ಟ್‍ಗೆ ಮಹಿಳೆಯ ಪತಿ ಅರ್ಜಿ ಸಲ್ಲಿಸಿದ್ದ. ಇದನ್ನೂ ಓದಿ: ಕೇಂದ್ರ, ರಾಜ್ಯದ ನಡುವೆ ಸ್ಪರ್ಧೆ ಬೇಡ – ಬರ ಪರಿಹಾರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಸಲಹೆ
Advertisement
Advertisement
ಮುಂಬೈನ ಥಾಣೆ ಜಿಲ್ಲೆಯ ವ್ಯಕ್ತಿ 2004ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ಕಾಟ್ಲೆಂಡ್‍ಗೆ ತೆರಳಿದ್ದ. ಸದ್ಯ ಅಲ್ಲಿಯೇ ಬ್ಯಾಂಕ್ ಅಧಿಕಾರಿಯಾಗಿದ್ದು ಬ್ರಿಟಿಷ್ ಪೌರತ್ವ ಪಡೆದಿದ್ದಾನೆ. ಆತನಿಗೆ ಈಗ 41 ವರ್ಷ ವಯಸ್ಸಾಗಿದ್ದು, ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಆನ್‍ಲೈನ್ ತಾಣದ ಮೂಲಕ ಬೆಂಗಳೂರಿನ 36 ವರ್ಷದ ಮಹಿಳೆಯನ್ನು 2023ರ ಮೇ 21ರಂದು ವಿವಾಹವಾಗಿದ್ದ. ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಾಗಿದ್ದು, ಬಸವನಗುಡಿ ಠಾಣೆ ಪೊಲೀಸರು ಪತಿಯ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
Advertisement
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು. ಪತ್ನಿ ಪರವಾಗಿ ವಕಾಲತ್ತು ವಹಿಸಿದ ಶ್ರವಣದೋಷ ಹೊಂದಿರುವ ವಕೀಲೆ ಸಾರಾ ಸನ್ನಿ ವಾದ ಮಂಡಿಸಿದರು. ಸಾರಾ ಸನ್ನಿಯವರ ವಾದವನ್ನ ಭಾಷಾಂತರಕ್ಕೆ ಅವಕಾಶ ನೀಡಲಾಯಿತು. ಈಗಾಗಲೇ ಸಾರಾಸನ್ನಿಯವರು ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಿದ್ದರು. ನ್ಯಾಯಾಲಯ ಏ.19ಕ್ಕೆ ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: 5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ತಡೆ