ಹಾಸನ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಕಿಡಿಕಾರಿದ್ದಾರೆ.
ಹೊಳೆನರಸೀಪುರ (Holenarasipura) ತಾಲ್ಲೂಕಿನ ಬಿದರಕ್ಕ ಕೊಳಲು ಗೋಪಾಲಕೃಷ್ಣ ದೇಗುಲಕ್ಕೆ ಭೇಟಿ ನೀಡಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪೂಜೆ ಸಲ್ಲಿಸಿದರು. ದೇವೇಗೌಡರು, ಚನ್ನಮ್ಮ ದೇವೇಗೌಡರು, ಸಹೋದರ ಹೆಚ್‌ಡಿ.ಕೆ, ಅನಿತಾ ಕುಮಾರಸ್ವಾಮಿ, ನಿಖಿಲ್, ರೇವತಿ ಹೆಸರಲ್ಲಿ ರೇವಣ್ಣ ಅರ್ಚನೆ ಮಾಡಿಸಿದರು. ಬಳಿಕ ಮೊಮ್ಮಗ ಅವ್ಯಾನ್ ಹೆಸರಿನಲ್ಲಿ ಹೆಚ್‌ಡಿಕೆ ಅರ್ಚನೆ ಮಾಡಿಸಿದರು.ಇದನ್ನೂ ಓದಿ:ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ದೆಹಲಿ ಸಿಎಂ ಅತಿಶಿ
Advertisement
Advertisement
Advertisement
ಬಳಿಕ ಮಾತನಾಡಿದ ರೇವಣ್ಣ, ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ನನ್ನನ್ನು ಹೆದರಿಸಬೇಕು ಎಂದುಕೊಂಡಿದ್ದರೆ ಅದನ್ನು ಕನಸು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಮುಂದೆ ಒಂದಲ್ಲ ಒಂದು ದಿನ ರಿವರ್ಸ್ ಹೊಡೆಯುವ ಕಾಲ ಬರುತ್ತದೆ. ಇವತ್ತು ಯರ‍್ಯಾರು ಏನೇನು ಮಾಡಿದ್ದಾರೆ? ನಮ್ಮ ತಂದೆ-ತಾಯಿ ಕಣ್ಣೀರು ಹಾಕುವಂತೆ ಮಾಡಿದವರು ಅನುಭವಿಸುತ್ತಾರೆ. ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್‌ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಹೆಚ್‌ಡಿ ಕುಮಾರಸ್ವಾಮಿ ಕೇಸ್ ಮತ್ತೇ ಓಪನ್ ಮಾಡಿಸಿದರ ಕುರಿತು ಮಾತನಾಡಿದ ಅವರು, ಕುಮಾರಣ್ಣರ ವಿರುದ್ಧ ಹತ್ತು ವರ್ಷದ ಕೇಸ್ ಇವತ್ತು ಮತ್ತೆ ಓಪನ್ ಮಾಡಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಅದನ್ನು ಕ್ಲೋಸ್ ಮಾಡಿಸಬಹುದಿತ್ತು. ಆ ಪಾಪದ ಕೆಲಸವನ್ನು ಅವರು ಮಾಡಲಿಲ್ಲ. ಕುಮಾರಣ್ಣ ನಲವತ್ತು ಜನ ಇಂಜಿನಿಯರ್‌ಗಳಿಗೆ ಪ್ರಮೋಷನ್ ಕೊಟ್ಟಿದ್ದಾರೆ. ಈ ರಾಜ್ಯಕ್ಕೆ ಅವರ ಕೊಡುಗೆ ತುಂಬಾ ಇದೆ. ಯಾರಾದರೂ ಒಬ್ಬರು ಇಂಜಿನಿಯರ್ ಕುಮಾರಣ್ಣ, ರೇವಣ್ಣ ಐದು ರೂಪಾಯಿ ತಗೊಂಡಿದ್ದಾರೆ ಎಂದು ಹೇಳಿದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇವೆ ಎಂದು ಹೇಳಿದರು.
ಇವತ್ತು ಸರ್ಕಾರ ಯಾವ ಮಟ್ಟಕ್ಕಿದೆ? ಬಿಜೆಪಿ ಸರ್ಕಾರನಾ ನಲವತ್ತು ಪರ್ಸೆಂಟ್ ಅನ್ನೋರು ಈ ಜಿಲ್ಲೆಯೊಳಗೆ ಲೋಕೋಪಯೋಗಿ ಇಲಾಖೆಯಲ್ಲಿ 400 ಕೋಟಿ ರೂ. ಬಿಲ್ ಬಾಕಿ ಇದೆ. ಬಿಲ್ ತಗೊಬೇಕಾದರೆ 40% ದುಡ್ಡು ಬಾಕಿ ಇದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ನಾನು ನಾಲ್ಕೈದು ತಿಂಗಳು ಸುಮ್ಮನಿದ್ದೆ. ಇನ್ನೊಂದು ಎರಡು ಮೂರು ತಿಂಗಳು ಹೋಗಲಿ. ವಿಧಾನಸಭೆ ಇರಲಿ, ಸಾರ್ವಜನಿಕವಾಗಿ ಈ ಸರ್ಕಾರದಲ್ಲಿ ಏನೇನು ನಡೆಯುತ್ತದೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸುವ ಕಾಲ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ಎರಡು ಸಾವಿರ ರೂ. ಕೊಡ್ತಿವಿ ಅಂದ್ದಿದ್ದರು. ಬಸ್ ಫ್ರೀ ಅಂದ್ದಿದ್ದರು. ಇವತ್ತು ಈ ಜಿಲ್ಲೆಯಲ್ಲಿರುವಷ್ಟು ಎಣ್ಣೆ ಅಂಗಡಿ ಈ ರಾಜ್ಯದಲ್ಲಿ ಎಲ್ಲೂ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ದರ್ಶನ್, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ