– ಮನೆಯಿಲ್ಲದ ಮಹಿಳೆ ಮೇಲೆ ದಿನಗೂಲಿ ಕಾರ್ಮಿಕರಿಂದ ಅತ್ಯಾಚಾರ
– ಮಧ್ಯಪ್ರದೇಶದಲ್ಲಿ 48 ಗಂಟೆ ಅವಧಿಯಲ್ಲಿ ಎರಡು ಭೀಕರ ಅತ್ಯಾಚಾರ ಪ್ರಕರಣ
ಭೋಪಾಲ್: ದೇಶಾದ್ಯಂತ ಸದ್ದು ಮಾಡಿದ್ದ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ, ಮಹಾರಾಷ್ಟ್ರದ ಬದ್ಲಾಪುರದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮಾಸುವ ಮುನ್ನವೇ ಮಧ್ಯಪ್ರದೇಶದಲ್ಲಿ ಮತ್ತೆರಡು ಭೀಕರ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
48 ಗಂಟೆಗಳ ಅವಧಿಯಲ್ಲಿ ಇಂದೋರ್ ಮತ್ತು ರೇವಾದಲ್ಲಿ ಒಂದೊಂದು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಬೆಚ್ಚಿಬೀಳಿಸುವಂತಿವೆ. ಇದನ್ನೂ ಓದಿ: ಸಾರ್ವಜನಿಕ-ಖಾಸಗಿ ಭದ್ರತಾ ಸಹಕಾರಕ್ಕೆ ಉತ್ತೇಜನ – OSAC ಇಂಡಿಯಾದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟನೆ
ರೇವಾ ಪ್ರಕರಣದಲ್ಲಿ, ದೇವಸ್ಥಾನದ ಸಮೀಪವಿರುವ ಪಿಕ್ನಿಕ್ ಸ್ಪಾಟ್‌ನಲ್ಲಿ ದಂಪತಿ ಮೇಲೆ ಹಲ್ಲೆ ನಡೆಸಲಾಗಿದೆ. ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಆತನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಆಕೆಯ ಅತ್ಯಾಚಾರಿಗಳು ಹಲ್ಲೆಯ ದೃಶ್ಯಗಳನ್ನು ಚಿತ್ರೀಕರಿಸಿ, ದಂಪತಿಗೆ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಅ.21 ರಂದು ಘಟನೆ ನಡೆದಿದೆ. ಮರುದಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಡಿಎಂ ಶವವಾಗಿ ಪತ್ತೆ
ಆಟಿಸಂ ಸಮಸ್ಯೆ ಇರುವ (ನರಮಂಡಲ ಸಮಸ್ಯೆ – ಸ್ವಲೀನತೆ) ಮಹಿಳೆಗೆ ದಿನಗೂಲಿ ಕಾರ್ಮಿಕರು ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ಮುಂಜಾನೆ 3:45 ರ ಸುಮಾರಿಗೆ ನಗರದ ಸದರ್ ಬಜಾರ್ ಪ್ರದೇಶದಲ್ಲಿ ಮಹಿಳೆ ಅರೆಬೆತ್ತಲೆಯಾಗಿ ಮತ್ತು ರಕ್ತಸ್ರಾವವಾಗಿ ಅಲೆದಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಕೆ ಮೇಲೆ ಅತ್ಯಾಚಾರ ಆಗಿರುವುದು ನಂತರ ತಿಳಿದುಬಂದಿದೆ.