ಮೈಸೂರು: ಮುಂದಿನ ವರ್ಷ ಏಪ್ರಿಲ್‍ನಲ್ಲಿ ನಿಮ್ಮ ಫೇಸ್‍ಬುಕ್ ಗೋಡೆಯಲ್ಲಿ ಅಭಿನಂದನೆಗಳಿಂದ ತುಂಬಿರುತ್ತದೆ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ಫಲಿತಾಂಶದ ಬಳಿಕ ಪ್ರತಾಪ್ ಸಿಂಹ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೂ ಮುನ್ನಾ, ಕಾಂಗ್ರೆಸ್‍ಗೆ ಅಭಿನಂದನೆಗಳು, ವಿಶೇಷವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
Advertisement
ಪ್ರತಾಪ್ ಸಿಂಹ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಸಾಲುಗಳು
“ಒಂದು ಸೋಲಿಗೋಸ್ಕರ ಆಳಿಗೊಂದರಂತೆ ಕಲ್ಲು ಹೊಡೆಯುವ ಪ್ರವೃತ್ತಿ ಒಳ್ಳೆಯದಲ್ಲ. ಸತತ ಸೋಲುಗಳನ್ನು ಹಾಗು ಸ್ವಂತ ಸೋಲನ್ನು ಜೀರ್ಣಿಸಿಕೊಂಡು ಇದೆ ಯಡಿಯೂರಪ್ಪನವರು 2008ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ನೆಲಕಚ್ಚಿದಾಗಲೂ ಬಿ.ಎಸ್.ವೈ. ಕರ್ನಾಟಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 19 ಎಂಪಿ ಸೀಟ್ ಗೆಲ್ಲಿಸಿದ್ದರು ಎಂಬುದನ್ನು ಮರೆತು ಮಾತನಾಡಬೇಡಿ. ಈ ಸೋಲನ್ನು ಪಾಠವಾಗಿ ಖಂಡಿತ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷ ಇದೆ ಏಪ್ರಿಲ್ ನಲ್ಲಿ ನಿಮ್ಮ ಫೇಸ್‍ಬುಕ್ ಗೋಡೆ ಅಭಿನಂದನೆಗಳಿಂದ ತುಂಬಿರುತ್ತದೆ. ನಿಮ್ಮ ಆಶೀರ್ವಾದದೊಂದಿಗೆ ವಿಶ್ವಾಸವಿಡಿ. ಸೋತ ಈ ಕ್ಷಣದಲ್ಲಿ ನಮಗೆ ಆತ್ಮವಿಶ್ವಾಸ ತುಂಬಿ” ಎಂದು ಬರೆದುಕೊಂಡಿದ್ದಾರೆ.
Advertisement
Advertisement
It's time to accept the defeat. Congratulations to Congress, especially to @CMofKarnataka Sir
— Pratap Simha (@mepratap) April 13, 2017
Advertisement
ಪತಿಯ ಅಭಿವೃದ್ಧಿ ಕೆಲ್ಸದಿಂದ ಗೆದ್ದಿದ್ದೇನೆ: ಪ್ರತಾಪ್ ಸಿಂಹಗೆ ಗೀತಾ ಮಹಾದೇವ್‍ಪ್ರಸಾದ್ ಟಾಂಗ್ https://t.co/7NdHUf46z5#Karnataka #bypolls #Congress pic.twitter.com/pHPnJMllva
— PublicTV (@publictvnews) April 13, 2017