30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ

Public TV
2 Min Read
narendra modi US visit

– 1993 ರ ಅಮೆರಿಕ ಭೇಟಿ ನೆನೆದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತುತ ಭಾರತದ ಪ್ರಧಾನಿಯಾಗಿ ಮೋದಿ ಅಮೆರಿಕ (America) ಪ್ರವಾಸ ಕೈಗೊಂಡು ಅಮೆರಿಕ ಅಧ್ಯಕ್ಷರಿಂದ ಭವಿಷ್ಯ ಸ್ವಾಗತ ಸ್ವೀಕರಿಸಿದ್ದಾರೆ. ಆದರೆ ಇದಕ್ಕೂ 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕನಂತೆ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಆ ಕ್ಷಣಗಳನ್ನು ಶ್ವೇತ ಭವನದಲ್ಲಿ ಪ್ರಧಾನಿ ನೆನಪಿಸಿಕೊಂಡಿದ್ದಾರೆ.

narendra modi white house 1993

1993 ರಲ್ಲಿ ನರೇಂದ್ರ ಮೋದಿ ಅವರು ಸಾಮಾನ್ಯ ನಾಗಕರಿಕನಾಗಿ ಅಮೆರಿಕಗೆ ಪ್ರವಾಸ ಕೈಗೊಂಡಿದ್ದರು. ಅಮೆರಿಕದ ಶ್ವೇತ ಭವನದ ಮುಂದೆ ಸಹಪಾಠಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದರು. ಆದರೆ ಈ ಸಲ ಭಾರತದ ಪ್ರಧಾನಿಯಾಗಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಅದೇ ಶ್ವೇತ ಭವನದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಕೂಡ ನೀಡಲಾಯಿತು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ದಂಪತಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗುತ್ತಾ ಅಮೆರಿಕ ವೀಸಾ? – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ಚಿಂತನೆ

narendra modi white house

ಅಮೆರಿಕದ ವಿಶೇಷ ಸ್ವಾಗತಕ್ಕೆ ಮರುಗಾದ ಪ್ರಧಾನಿ ಮೋದಿ ಉತ್ತಮ ಬಾಂಧವ್ಯಕ್ಕೆ ಧನ್ಯವಾದ ಹೇಳಿದರು. ಈ ಸ್ವಾಗತ ಭಾರತದ 140 ಕೋಟಿ ಜನರಿಗೆ ಸಲ್ಲಿಸಿದ ಗೌರವ. ಅಮೆರಿಕಾದಲ್ಲಿರುವ ಭಾರತೀಯರಿಗೆ ಸಲ್ಲಿಸಿದ ಗೌರವ. ಈ ಗೌರವ ಸಲ್ಲಿಸಿದ ಜೋ ಬೈಡನ್ ದಂಪತಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

modi in white house

ಮೂರು ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೆರಿಕ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್‌ಹೌಸ್‌ನ್ನು ಹೊರಗಡೆಯಿಂದ ನೋಡಿದೆ. ಈಗ ಪ್ರಧಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ಭಾರತೀಯರನ್ನು ನೋಡುತ್ತಿದ್ದೇನೆ ಎಂದು ಮಧುರ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

narendra modi joe biden 1

ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದೇಶಗಳ ನಡುವೆ ಸಂಬಂಧ ಹೆಚ್ಚಿಸುತ್ತಿದ್ದಾರೆ. ಎರಡು ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಧಾರಿತವಾಗಿದೆ. ಎರಡು ದೇಶಗಳ ವಿವಿಧತೆಯನ್ನು ನಾವು ಗೌರವಿಸುತ್ತೇವೆ. ಕೊರೊನಾ ನಂತರದ ಕಾಲದಲ್ಲಿ ಭಾರತ-ಅಮೆರಿಕ ಶಕ್ತಿ ಹೆಚ್ಚುತ್ತಿದೆ. ಜಾಗತಿಕ ಒಳಿತಗಾಗಿ ಒಂದಾಗಿ ಕೆಲಸ ಮಾಡಲು ಬದ್ಧವಾಗಿದ್ದೇವೆ. ಎರಡು ದೇಶಗಳ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಎಂದಿನಂತೆ ಇಂದಿನ ಮಾತುಕತೆಯೂ ಸಕಾರಾತ್ಮಕವಾಗಿರಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಇದಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಅಮೆರಿಕ ಮತ್ತು ಭಾರತದ ಧ್ವಜ ಹೊಸ ಅವಕಾಶಗಳೊಂದಿಗೆ ಆಕಾಶದತ್ತ ಮತ್ತಷ್ಟು ಏರಲಿದೆ. ವಿಶೇಷ ಆತಿಥ್ಯ ನೀಡಿದ್ದಕ್ಕಾಗಿ 140 ಕೋಟಿ ಭಾರತೀಯರ ಪರವಾಗಿ ಮತ್ತೊಮ್ಮೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

Share This Article