ಮಂಡ್ಯ: ಕಾಲೇಜು ಹುಡುಗರ ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಮನೆಗೆ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಭೇಟಿ ನೀಡಿ ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಹಿಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದರು. ಇಂದು ಇಮ್ರಾನ್ ಪಾಷಾ ಆಕೆಯ ಮನೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
Advertisement
Advertisement
ನಿನ್ನೆ ನಡೆದ ಘಟನೆ ಬಗ್ಗೆ ಬೇಸರವಾಗಿದೆ. ಹೀಗಾಗಿ ಇಂದು ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾತನಾಡಿದ್ದೇನೆ. ಅವರಿಗೆ ಧೈರ್ಯ ಹೇಳಿ 1 ಲಕ್ಷ ರೂ. ಚೆಕ್ ನೀಡಿದ್ದೇನೆ. ಘಟನೆ ಬಗ್ಗೆ ಅವರು ಕಾನೂನಾತ್ಮಕವಾಗಿ ಯಾವುದೇ ಕ್ರಮ ತೆಗೆದುಕೊಂಡರೂ ಅವರೊಂದಿಗೆ ನಾನು ಇರುತ್ತೇನೆ ಎಂದು ಇಮ್ರಾನ್ ಪಾಷಾ ತಿಳಿಸಿದ್ದಾರೆ.
Advertisement
ಮುಸ್ಕಾನ್ ಕುಟುಂಬಕ್ಕೆ ಯಾರಾದರೂ ಹಲ್ಲೆ ಅಥವಾ ತೊಂದರೆ ಕೊಡಲು ಬಂದರೆ ಪೊಲೀಸ್ ಠಾಣೆಗೆ ದೂರು ಕೊಡಲು ಹೇಳಿದ್ದೇನೆ. ಸರ್ಕಾರದ ಜೊತೆ ಮಾತನಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಇರುತ್ತೇನೆ. ಜೈ ಶ್ರೀರಾಮ್ ಎಂದು ಕೂಗುವುದರಲ್ಲಿ ತಪ್ಪೇನಿಲ್ಲ. ಆದರೆ ಆ ವಿದ್ಯಾರ್ಥಿಗಳನ್ನು ಯಾರೋ ಪ್ರಚೋದನೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ
Advertisement
ಇದೇ ವೇಳೆ ಮುಸ್ಕಾನ್‍ಗೆ ಯೂತ್ ಐಕಾನ್ ಬಿರುದು ಹಾಗೂ ಕ್ಯಾಶ್ ಪ್ರೈಸ್ ಘೋಷಣೆ ವಿಚಾರವಾಗಿ ಮಾತನಾಡಿದ ಪಾಷಾ, ಒಳ್ಳೆಯ ಭಾವನೆ ಇಟ್ಟುಕೊಂಡು ಕೊಟ್ಟರೆ ಸರಿ. ಕೆಟ್ಟ ಉದ್ದೇಶದಿಂದ ಆ ರೀತಿ ಹಣ ನೀಡುವುದು ತಪ್ಪು. ಯಾರೂ ಮುಸ್ಕಾನ್‍ಗೆ ಹಣ ನೀಡಿಲ್ಲ. ಯಾರೋ ಬಂದು ಏನೋ ಕೊಟ್ಟರೆ ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಬಾರದು. ಬಂದ ದುಡ್ಡನ್ನು ಬಡವರಿಗೆ ಕೊಡುತ್ತೇವೆ ಎಂದು ಮುಸ್ಕಾನ್ ಕುಟುಂಬ ಹೇಳಿದೆ ಎಂದು ಇಮ್ರಾನ್ ಪಾಷಾ ತಿಳಿಸಿದ್ದಾರೆ.