ತನಗಿಂತ 13 ವರ್ಷ ಕಿರಿಯನೊಂದಿಗೆ 3ನೇ ಮದುವೆಯಾದ ಪಾಕ್‌ ಮಾಜಿ ಪ್ರಧಾನಿಯ ex-wife

Public TV
1 Min Read
reham khan marriage

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಮಾಜಿ ಪತ್ನಿ ರೆಹಮ್‌ ಖಾನ್‌ (Reham Khan) ಮೂರನೇ ಮದುವೆಯಾಗಿದ್ದಾರೆ. ತನಗಿಂತ 13 ವರ್ಷ ಕಿರಿಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ (Mirza Bilal Baig) ಅವರನ್ನು ವಿವಾಹವಾಗಿರುವ ರೆಹಮ್‌ ಖಾನ್‌ ಹೇಳಿಕೊಂಡಿದ್ದಾರೆ. ಮಿರ್ಜಾ ಬಿಲಾಲ್‌ ಪೋಷಕರು ಮತ್ತು ನನ್ನ ಮಗ ನನ್ನ ವಕೀಲ್ ಆಶೀರ್ವಾದದೊಂದಿಗೆ ನಾವು ಸಿಯಾಟಲ್‌ನಲ್ಲಿ ವಿವಾಹವಾಗಿದ್ದೇವೆ ಎಂದು ರೆಹಮ್‌ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ರಾಜಧಾನಿಯಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್ ಸಾವು, ಹಲವರಿಗೆ ಗಾಯ

reham khan

ರೆಹಮ್‌ ಖಾನ್‌ಗೆ 49 ಹಾಗೂ ಮಿರ್ಜಾ ಬಿಲಾಲ್‌ಗೆ 36 ವಯಸ್ಸು. ಯುಎಸ್ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೂ ಇದು ಮೂರನೇ ವಿವಾಹವಾಗಿದೆ.

1993ರಲ್ಲಿ ಇಜಾಜ್‌ ರೆಹಮಾನ್‌ ಅವರೊಂದಿಗೆ ರೆಹಮ್‌ ವಿವಾಹವಾಗಿದ್ದರು. ನಂತರ 2015 ರಲ್ಲಿ ರೆಹಮ್ ಖಾನ್, ಇಮ್ರಾನ್ ಖಾನ್ ಅವರೊಂದಿಗೆ ಇಸ್ಲಾಮಾಬಾದ್ ಮನೆಯಲ್ಲಿ ವಿವಾಹವಾಗಿದ್ದರು. ಆದರೆ 10 ತಿಂಗಳ ನಂತರ ಅವರಿಗೆ ವಿಚ್ಛೇದನ ನೀಡಿದರು. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

ರೆಹಮ್ ಖಾನ್ 1973 ರಲ್ಲಿ ಲಿಬಿಯಾದ ಅಜ್ದಬಿಯಾದಲ್ಲಿ ಜನಿಸಿದರು. ಪಾಕಿಸ್ತಾನದಲ್ಲಿ ಅಧ್ಯಯನ ಮಾಡಿದ ನಂತರ, ಅವರು 90 ರ ದಶಕದ ಮಧ್ಯಭಾಗದಲ್ಲಿ BBC ಸೌತ್ ಟುಡೇಗೆ ಹವಾಮಾನ ನಿರೂಪಕಿಯಾಗಿ ಸೇರಿದರು. ನಂತರ UK ನಲ್ಲಿ ಪ್ರಸಾರ ಪತ್ರಕರ್ತರಾಗಿ ಕೆಲಸ ಮಾಡಿದರು. 2012 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯ ಟಿವಿ ಕಾರ್ಯಕ್ರಮಕ್ಕಾಗಿ ಸಂದರ್ಶನ ಮಾಡುವಾಗ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *