6 ದಿನಗಳೊಳಗೆ ಚುನಾವಣೆ ಘೋಷಿಸಿ, ಇಲ್ಲವೇ…: ಇಮ್ರಾನ್ ಖಾನ್ ಎಚ್ಚರಿಕೆ

Advertisements

ಇಸ್ಲಾಮಾಬಾದ್: 6 ದಿನಗಳೊಳಗೆ ಚುನಾವಣೆ ಘೋಷಿಸಿ. ಇಲ್ಲವೇ ಇಡೀ ರಾಷ್ಟ್ರದೊಂದಿಗೆ ನಾವು ಇಸ್ಲಾಮಾಬಾದ್ ಪ್ರವೇಶಿಸಿ, ಪ್ರತಿಭಟನೆ ನಡೆಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisements

ಇಮ್ರಾನ್ ಖಾನ್ ಪ್ರಾರಂಭಿಸಿದ ಪ್ರತಿಭಟನೆಯ ಮೆರವಣಿಗೆ ಗುರುವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಪ್ರವೇಶಿಸಿದ್ದು, ಅಶಾಂತಿಯನ್ನು ನಿಯಂತ್ರಿಸಲು ಶೆಹಬಾಜ್ ಷರೀಫ್ ಸರ್ಕಾರ ವಿಫಲವಾಗಿದೆ. ಇದೀಗ ರಕ್ಷಣೆಗಾಗಿ ಸೇನೆಯನ್ನು ಕರೆಸುವಂತೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

Advertisements

ಈ ವೇಳೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಇಮ್ರಾನ್ ಖಾನ್, 6 ದಿನಗಳ ಒಳಗಾಗಿ ಚುನಾವಣೆ ಘೋಷಣೆ ಆಗಬೇಕು. ಇಲ್ಲವೇ ಇಡೀ ರಾಷ್ಟ್ರದೊಂದಿಗೆ ನಾವು ಮತ್ತೆ ಇಸ್ಲಾಮಾಬಾದ್‌ಗೆ ಹಿಂತಿರುಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದ ವಿಮಾನ ಕಾರ್ಯಾಚರಣೆಗೆ ಯುಎಇ ಜೊತೆ ತಾಲಿಬಾನ್ ಒಪ್ಪಂದ

ಏಪ್ರಿಲ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಪದಚ್ಯುತಿಗೊಂಡಿದ್ದರು. ಬಳಿಕ ಹೊಸ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅಧಿಕಾರ ಸ್ವೀಕರಿಸಿದ್ದರು. ಇದೀಗ ಹೊಸ ಚುನಾವಣೆಗೆ ಒತ್ತಾಯಿಸಿ ಇಮ್ರಾನ್ ಖಾನ್ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisements
Advertisements
Exit mobile version