ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ (Election) ಕೆಲವೆ ತಿಂಗಳು ಬಾಕಿ ಇರುವ ಹೊತ್ತಿನಲ್ಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imran Khan) ಮತ್ತೊಂದು ಸಂಕಷ್ಟ ಬಂದೊದಗಿದೆ. ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಬ್ಬರ ಜೊತೆ ಇಮ್ರಾನ್ ಖಾನ್ ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದರು ಎನ್ನುವ ಆಡಿಯೋ ತುಣುಕೊಂದು ಸೋರಿಕೆಯಾಗಿದೆ (Audio Viral).
Advertisement
ಪಾಕಿಸ್ತಾನದ ಪತ್ರಕರ್ತ (Pakistan Journalist) ಸಯ್ಯದ್ ಅಲಿ ಹೈದರ್, ಯೂಟ್ಯೂಬ್‌ನಲ್ಲಿ (Youtube) ಈ ಆಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಆಡಿಯೋ ಪಾಕಿಸ್ತಾನ ಪ್ರಧಾನಿ ಕಚೇರಿಯಿಂದಲೇ ಸೃಷ್ಟಿಯಾಗಿದೆ ಎಂದು ಕೆಲವು ವರದಿಗಳು ಆರೋಪಿಸಿವೆ. ಇದನ್ನೂ ಓದಿ: ಇಂಗ್ಲೆಂಡ್ ರಾಜನ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿಗೆ 6 ತಿಂಗಳು ಜೈಲು ಶಿಕ್ಷೆ
Advertisement
Advertisement
ಸದ್ಯ ಇಮ್ರಾನ್ ಖಾನ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇಮ್ರಾನ್ ಖಾನ್ ಈ ವರ್ಷದ ಆರಂಭದಲ್ಲಿ ಅಧಿಕಾರ ಕಳೆದುಕೊಂಡ ನಂತರ ಈ ಮಾತುಕತೆಗಳು ನಡೆದಿವೆ ಎಂದು ಹೇಳಲಾಗಿದೆ. ಇದು ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್- ಇ- ಇನ್ಸಾಫ್ (PTI) ಪಕ್ಷಕ್ಕೆ ತೀವ್ರ ಕಸಿವಿಸಿ ಉಂಟುಮಾಡಿದೆ. ಆದ್ರೆ ಪಿಟಿಐ ಪಕ್ಷದ ಪ್ರಮುಖರು ಇದು ನಕಲಿ ಆಡಿಯೋ ಎಂದು ಪ್ರತಿಪಾದಿಸಿದ್ದಾರೆ. ಪಕ್ಷದ ಮುಖ್ಯಸ್ಥರನ್ನು ಟಾರ್ಗೆಟ್ ಮಾಡಲು ಸರ್ಕಾರವು ನಕಲಿ ವೀಡಿಯೋ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.
Advertisement
ಇಮ್ರಾನ್ ಖಾನ್ ಹಾಗೂ ಮಹಿಳೆ (Women) ಜತೆ ದೂರವಾಣಿಯಲ್ಲಿ ಆಪ್ತ ಮಾತುಕತೆ ನಡೆದಿದೆ ಎಂದು ಆಡಿಯೋ ಕ್ಲಿಪ್‌ಗಳ ಮೂಲಕ ಆರೋಪಿಸಲಾಗಿದೆ. ಇದರಲ್ಲಿ ಇಮ್ರಾನ್ ಖಾನ್, ತಾವಿಬ್ಬರೂ ಭೇಟಿಯಾಗಬೇಕು ಎಂದು ಒತ್ತಾಯಿಸಿದ್ದು, ಅಶ್ಲೀಲ ಪದಗಳನ್ನು ಬಳಸಿರುವುದು ದಾಖಲಾಗಿದೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ
ಇಮ್ರಾನ್ ಖಾನ್ ಅವರ ಧ್ವನಿಯನ್ನು ಹೋಲುವ ಆಡಿಯೋದಲ್ಲಿ ಭೇಟಿಯ ಕುರಿತಂತೆ ಚರ್ಚೆ ನಡೆದಿದೆ. ಮರುದಿನ ಭೇಟಿಯಾಗುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಆದರೆ ತನ್ನ ಕುಟುಂಬದವರನ್ನು ಭೇಟಿ ಮಾಡಿಬೇಕಿರುವುದರಿಂದ ಅದನ್ನು ನಂತರ ಖಚಿತಪಡಿಸುವುದಾಗಿ ಧ್ವನಿ ಹೇಳಿದೆ. ನನ್ನ ಕುಟುಂಬ ಹಾಗೂ ಮಕ್ಕಳು ಬರುತ್ತಿದ್ದಾರೆ. ಅವರು ತಡವಾಗಿ ಬರುವಂತೆ ಮಾಡಲು ಪ್ರಯತ್ನಿಸುತ್ತೇನೆ. ನಿನಗೆ ನಾಳೆ ಭೇಟಿಯಾಗುವ ಬಗ್ಗೆ ತಿಳಿಸುತ್ತೇನೆ’ ಎಂಬ ಸಂಭಾಷಣೆ ನಡೆದಿದೆ.