ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ‘ದಿ ಕಪಿಲ್ ಶರ್ಮಾ ಶೋ’ಗೆ ಸೇರಬಹುದು ಎಂದು ಅವರ ಮಾಜಿ ಪತ್ನಿ ರೆಹಮ್ ಖಾನ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಮ್ರಾನ್ ಖಾನ್ ಅವರು ಬಾಲಿವುಡ್‍ನ ದಿ ಕಪಿಲ್ ಶರ್ಮಾ ಶೋ ನಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಉತ್ತಮ ಬದಲಿಯಾಗಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಇಮ್ರಾನ್ ಅವರು ಭಾರತವನ್ನು ಖುದ್ದರ್ ಕ್ವಾಮ್ (ಬಹಳ ಸ್ವಾಭಿಮಾನದ ಜನರು) ಎಂದು ಹೊಗಳಿದ್ದರು. ಹೀಗಾಗಿ ಅವರು, ತಮ್ಮ ಮಾಜಿ ಪತಿಯನ್ನು ಲೇವಡಿ ಮಾಡಿದ್ದು, ಅವರು ಬಾಲಿವುಡ್‍ನಲ್ಲಿ ನಟಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್
ಭಾರತವು ಇಮ್ರಾನ್‍ಗೆ ಜಾಗವನ್ನು ನೀಡಬೇಕು ಅಂತ ನಾನು ಭಾವಿಸುತ್ತೇನೆ. ಅವರು ಬಹುಶಃ ಬಾಲಿವುಡ್‍ನಲ್ಲಿದ್ದರೆ ಅವರು ಆಸ್ಕರ್ ವಿಜೇತ ಪ್ರದರ್ಶನವನ್ನು ನೀಡುತ್ತಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ
ಇಮ್ರಾನ್ ಅವರಿಗೆ ನಾಯಕ ಅಥವಾ ಖಳನಾಯಕನ ಪಾತ್ರವನ್ನು ನೀಡಬೇಕೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಅದು ಅವರ ಮೇಲೆ ಅವಲಂಬಿತವಾಗಿದೆ. ಬಾಲಿವುಡ್‍ನಲ್ಲಿ, ಹೀರೋಗಳು ವಿಲನ್ ಆಗುತ್ತಾರೆ. ವಿಲನ್‍ಗಳು ಹೆಚ್ಚು ಜನಪ್ರಿಯರಾಗುತ್ತಾರೆ. ಆದರೆ ಅವರಲ್ಲಿ ಹಾಸ್ಯ ಪ್ರತಿಭೆಯೂ ಇದೆ ಎಂದು ನಾನು ಭಾವಿಸುತ್ತೇನೆ. ಬೇರೇನೂ ಇಲ್ಲ, ಕಪಿಲ್ ಶರ್ಮಾ ಶೋನಲ್ಲಿ ಪಾಜಿ ಅವರ (ನವಜೋತ್ ಸಿಧು ಅವರ) ಸ್ಥಾನ ಖಾಲಿಯಾಗಿದೆ. ಹೀಗಾಗಿ ಅವರು ಸಿಧು ಅವರ ಹಾಗೇ ಶಾಯರಿ ಹೇಳುತ್ತಾ ಕುಳಿತುಕೊಳ್ಳಬಹುದು ಎಂದರು.
ಇಮ್ರಾನ್ ಅವರು ಸಿಧು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಅವರೊಂದಿಗೆ ಸ್ವಲ್ಪ ಜಾಗ ಹಂಚಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದರು.