ಇಸ್ಲಾಮಾಬಾದ್: ತಮ್ಮ ಮೇಲಿನ ಗುಂಡಿನ ದಾಳಿ ಬಳಿಕ ಸ್ವಲ್ಪ ಚೇತರಿಸಿಕೊಂಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan), ತಮ್ಮ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ (Protest) ರ‍್ಯಾಲಿಯನ್ನು ಕೈಬಿಡುವ ಮಹತ್ವದ ಘೋಷಣೆ ಮಾಡಿದ್ದಾರೆ.
شکریہ راولپنڈی، شکریہ پاکستان۔
آج ایک بار پھر پاکستانی قوم نے ثابت کردیا کہ عمران خان اس ملک کے محبوب ترین سیاسی رہنما ہیں اور ان کی قیادت میں قوم یکجا ھے۔ چئیرمین کا اسمبلیوں سے استعفوں کا فیصلہ خوش آئیند اور قومی امنگوں کا عکاس ھے۔ پاکستان کے مسائل کا واحد حل فوری الیکشن ھے۔ pic.twitter.com/BVGVrFKkOx
— Shah Mahmood Qureshi (@SMQureshiPTI) November 26, 2022
Advertisement
ಪಾಕಿಸ್ತಾನದ ಸಂಸತ್ತು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿರುವ ತಮ್ಮ ಪಕ್ಷದ ಎಲ್ಲ ಸದಸ್ಯರಿಗೂ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಪಾಕಿಸ್ತಾನದ ಮುಖ್ಯ ನಗರ ರಾವಲ್‌ಪಿಂಡಿಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್‌ರೀಕ್-ಎ-ಇನ್‌ಸಾಫ್ (PTI Party) ಆಯೋಜಿಸಿದ್ದ ಪ್ರತಿಭಟನೆಯು ದೊಡ್ಡಪ್ರಮಾಣದಲ್ಲಿ ಜನರು ಸೇರಿದ್ದರು. ಇಸ್ಲಾಮಾಬಾದ್‌ವರೆಗೆ ನಡೆಸಲು ಉದ್ದೇಶಿಸಿದ್ದ ರ‍್ಯಾಲಿಯನ್ನು ಅರ್ಧದಲ್ಲೇ ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು
Advertisement
کرسی نہیں عزیز، اسے ہے عزیز یہ قوم
عمران جیسا صاحب کردار کون ہے !!#حقیقی_آزادی_لانگ_مارچ pic.twitter.com/FeVKxxZ7Re
— DureShahwaar (@Dureshahwaar99) November 26, 2022
Advertisement
ತಮ್ಮ ಪಕ್ಷದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋನಲ್ಲಿ ಅವರು ಮಾತನಾಡಿದ್ದಾರೆ, ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ. ನಮ್ಮದೇ ದೇಶವನ್ನು ನಾವು ಹಿಂಸಾಚಾರ, ಅಸ್ಥಿರತೆಗೆ ದೂಡುವ ಬದಲು ಈ ಭ್ರಷ್ಟ ಸರ್ಕಾರದಿಂದ (Pakistan Government) ಹೊರಬರುವುದು ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗ್ಳೂರಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ – ಪ್ರಸಿದ್ಧ ವೈದ್ಯೆ, ಯುವಕನ ವಿರುದ್ಧ ದೂರು ದಾಖಲು
Advertisement
ಈ ತಿಂಗಳ ಆರಂಭದಲ್ಲಿ ಇಮ್ರಾನ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಸ್ವತಃ ಇಮ್ರಾನ್ ಖಾನ್‌ಗೂ ಗಾಯಗಳಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಮ್ರಾನ್ ಖಾನ್ ಚೇತರಿಸಿಕೊಂಡಿದ್ದರು. ನಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ವಿಫಲರಾದೆವು ಎಂದು ಹೇಳಿದ್ದಾರೆ.
ಶ್ರೀಲಂಕಾದಂಥ (SriLanka) ಪರಿಸ್ಥಿತಿಯನ್ನು ನಾವು ಇಲ್ಲಿಯೂ ನಿರ್ಮಿಸಬಹುದಿತ್ತು. ಆದರೆ ದೇಶದಲ್ಲಿ ಅರಾಜಕತೆ ಉಂಟಾಗಬಾರದು ಎನ್ನುವ ಕಾರಣಕ್ಕೆ ನಾವು ಇಸ್ಲಾಮಾಬಾದ್‌ವರೆಗಿನ ಪಾದಯಾತ್ರೆಯನ್ನು ಮುಂದೂಡಿದ್ದೇವೆ. ನಮ್ಮ ದೇಶಕ್ಕೆ ಯಾವುದೇ ಹಾನಿ ಉಂಟಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ.