ರೋಹಿತ್‍ಗೆ ನೆಟ್ಸ್‌ನಲ್ಲಿ ಇನ್‍ಸ್ವಿಂಗ್ ಎಸೆದ ಹನ್ನೊಂದರ ಪೋರ

Public TV
1 Min Read
ROHITH SHARMA 1

ಸಿಡ್ನಿ: ಟೀಂ ಇಂಡಿಯಾದ (Team India) ನಾಯಕ ರೋಹಿತ್ ಶರ್ಮಾಗೆ (Rohit Sharma) ನೆಟ್ಸ್‌ನಲ್ಲಿ (Nets)  ಹನ್ನೊಂದರ ಬಾಲಕನೋರ್ವ ಬೌಲಿಂಗ್ (Bowling) ಮಾಡಿ ಮನಗೆದ್ದಿದ್ದಾನೆ.

ROHITH SHARMA 2

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‍ಗಾಗಿ ಭಾರತ ತಂಡ ಪರ್ತ್‍ನಲ್ಲಿ ಬೀಡುಬಿಟ್ಟಿದೆ. ಮೈದಾನದಲ್ಲಿ ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಚಟುವಟಿಕೆಯಲ್ಲಿ ಬಾಲಕ ದೃಶಿಲ್ ಚೌಹಾಣ್  (Drushil Chauhan) ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಇದನ್ನು ಪೆವಿಲಿಯನ್‍ನಲ್ಲಿ ನಿಂತು ನೋಡುತ್ತಿದ್ದ ರೋಹಿತ್, ದೃಶಿಲ್ ಚೌಹಾಣ್‍ನನ್ನು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಣರೋಚಕ T20 ವಿಶ್ವಕಪ್ ಆರಂಭ – ಟೀಂ ಇಂಡಿಯಾದತ್ತ ಎಲ್ಲರ ಚಿತ್ತ

ROHITH SHARMA 1 1

ರೋಹಿತ್‍ ಬೌಲಿಂಗ್ ಮಾಡಲು ಆಹ್ವಾನಿಸುತ್ತಿದ್ದಂತೆ ಸಂತಸದಿಂದ ಆಗಮಿಸಿದ ದೃಶಿಲ್ ಚೌಹಾಣ್ ಇನ್‍ಸ್ವಿಂಗ್ ಬೌಲಿಂಗ್ ಮಾಡುವ ಮೂಲಕ ರೋಹಿತ್ ಶರ್ಮಾರ ಮನಗೆದ್ದಿದ್ದಾನೆ. ದೃಶಿಲ್ ಚೌಹಾಣ್ ಬೌಲಿಂಗ್‍ಗೆ ರೋಹಿತ್ ಕೂಡ ಸೊಗಸಾಗಿ ಬ್ಯಾಟ್ ಬೀಸಿದ ವೀಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

ದೃಶಿಲ್ ಚೌಹಾಣ್ ಬೌಲಿಂಗ್ ಮಾಡಿದ ಬಳಿಕ ರೋಹಿತ್‍ರಿಂದ ಆಟೋಗ್ರಾಫ್ ಪಡೆದಿದ್ದಾನೆ. ಜೊತೆಗೆ ಮಾತುಕತೆ ನಡೆಸಿದ್ದು, ಈ ವೇಳೆ ನಾನು ಇನ್‍ಸ್ವಿಂಗ್ ಯಾರ್ಕರ್ (In Swinging Yorker) ಎಸೆಯಲು ತುಂಬಾ ಇಷ್ಟಪಡುತ್ತೇನೆ ಎಂದಿದ್ದಾನೆ.

ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ ಆರಂಭವಾಗಿದೆ. ಭಾರತ ಕೂಟದ ಮೊದಲ ಪಂದ್ಯವನ್ನು ಪಾಕಿಸ್ತಾನ (Pakistan) ವಿರುದ್ಧ ಅ.23 ರಂದು ಆಡಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *