ಮಂಡ್ಯ: ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂ (KRS Dam) ಭರ್ತಿಯಾಗಿಲ್ಲ. ಇದರ ನಡುವೆ ತಮಿಳುನಾಡಿಗೆ (Tamil Nadu) ಡ್ಯಾಂನಿಂದ ನೀರು ಬಿಡಲಾಗುತ್ತಿದೆ. ಇತ್ತ ರೈತರ ಬೆಳೆಗೆ ನೀರು ಬಿಡಬೇಕಾ ಬಿಡಬಾರದಾ ಎಂಬುದರ ಕುರಿತು ಸೋಮವಾರ ಮಹತ್ವದ ಸಭೆ ನಡೆಯಲಿದೆ.
ರೈತನ ಬದುಕು ಮಾನ್ಸೂನ್‌ನೊಂದಿಗಿನ ಜೂಜಾಟ ಎಂಬ ಮಾತು ಇದೆ. ಈ ಮಾತಿನಂತೆ ಮಂಡ್ಯ ಜಿಲ್ಲೆಯ ರೈತರ ಕೃಷಿಯ ಬದುಕು ಸದ್ಯ ಜೂಜಾಟದ ರೀತಿಯೇ ಇದೆ. ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಕಾರಣ ಹಳೆ ಮೈಸೂರು ಭಾಗದ ಜೀವನಾಡಿ ಎಂದೇ ಕರೆಯಲ್ಪಡುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಒಡಲು ಇನ್ನೂ ಭರ್ತಿಯಾಗಿಲ್ಲ.
Advertisement
Advertisement
ಕಳೆದ ವರ್ಷ ಇಷ್ಟೋತ್ತಿಗೆ ಉತ್ತಮ ಮಳೆ ಬಿದ್ದು ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವುದರ ಜೊತೆಗೆ ತಮಿಳುನಾಡಿನ ನೀರಿನ ವ್ಯಾಜ್ಯವು ತಲೆದೋರಿರಲಿಲ್ಲ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 35 ಟಿಎಂಸಿ ನೀರು ಮಾತ್ರ ಇದೆ. ಈ ಹೊತ್ತಿನಲ್ಲಿಯೇ ತಮಿಳುನಾಡು ನಮಗೆ ಬಿಡಬೇಕಾದ ನೀರನ್ನು ಬಿಡಿ ಎಂದು ಕೇಂದ್ರದ ಮೊರೆ ಹೋಗಿದೆ. ಈ ಬೆನ್ನಲ್ಲೇ ಕಳೆದ 3 ದಿನಗಳಿಂದ ತಮಿಳುನಾಡಿಗೆ ನಿತ್ಯ 5 ಸಾವಿರಕ್ಕೂ ಅಧಿಕ ಟಿಎಂಸಿ ನೀರು ಹೋಗ್ತಾ ಇದೆ. ಇತ್ತ ನಾಲೆಗಳಿಗೆ ಬಿಟ್ಟಿದ್ದ ನೀರನ್ನು ನಿಲ್ಲಿಸಲಾಗಿದೆ. ಹೀಗಾಗಿ ಮಂಡ್ಯದ ರೈತರು ಆಕ್ರೋಶಿತರಾಗಿದ್ದು, ಬೆಳೆಗಳಿಗೆ ನೀರಿಗಾಗಿ ಆಗ್ರಹ ಮಾಡುತ್ತಾ ಇದ್ದಾರೆ.
Advertisement
ಮಂಡ್ಯದ (Mandya) ರೈತರ ಎಚ್ಚರಿಕೆಯ ಬೆನ್ನಲ್ಲೇ ಸರ್ಕಾರ ಇದೀಗ ಅಲರ್ಟ್ ಆದ ಹಾಗೆ ಕಾಣುತ್ತಿದೆ. ಇಂದು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಕೆಆರ್‌ಎಸ್‌ನಲ್ಲಿ ಮಹತ್ವದ ಸಭೆಯೊಂದು ನಡೆಯಲಿದೆ. ಸಭೆಯಲ್ಲಿ ಶಾಸಕರು, ಜಿಲ್ಲಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಇತರ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನೀರಾವರಿ ಸಲಹಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ರೈತರ ಬೆಳೆಗಳಿಗೆ ನೀರನ್ನು ಬಿಡಬೇಕಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಇದನ್ನೂ ಓದಿ: ಟೊಮೆಟೋ ಬೆಲೆಯಲ್ಲಿ ಕೊಂಚ ಇಳಿಕೆ- ನಿಟ್ಟುಸಿರು ಬಿಟ್ಟ ಗ್ರಾಹಕರು
Advertisement
ಒಂದು ವೇಳೆ ಬೆಳೆಗಳಿಗೆ ನೀರು ಕೊಟ್ಟರೆ ಎಷ್ಟು ಹಂತದಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತದೆ. ಸದ್ಯ ತಮಿಳುನಾಡಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಕಷ್ಟದ ಸೂತ್ರದ ಅಡಿ ತಮಿಳುನಾಡಿಗೆ ನೀರು ಬಿಡಬೇಕಾಗಿರುವುದು ಅನಿವಾರ್ಯ. ಅಲ್ಲದೇ ಈ ತಿಂಗಳು ಮಳೆ ಬೀಳದೆ ಇದ್ದರೆ ಕುಡಿಯುವ ನೀರನ್ನು ಶೇಖರಣೆ ಮಾಡಿಕೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಇದೆ. ಇದೆಲ್ಲವನ್ನು ನೋಡಿಕೊಂಡು ಬೆಳೆಗಳಿಗೆ ನೀರು ಕೊಡಬೇಕಾ ಕೊಡಬಾರದ ಎಂದು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.
ಒಟ್ಟಾರೆ ಒಂದು ಕಡೆ ಮಳೆ ಬೀಳದೆ ರೈತರು ಕಂಗಾಲಾಗಿದ್ದರೆ ಇನ್ನೊಂದೆಡೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಬಿಡುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಮಂಡ್ಯ ರೈತರು ಇದ್ದಾರೆ. ಒಂದು ವೇಳೆ ನಾಲೆಗಳಿಗೆ ನೀರು ಬಿಡುವುದಿಲ್ಲ ಎಂದರೆ ರೈತರು ಆಕ್ರೋಶ ವ್ಯಕ್ತಪಡಿಸುವುದು ಕಟ್ಟಿಟ್ಟ ಬುತ್ತಿಯಾಗಿದೆ. ಇದನ್ನೂ ಓದಿ: ವಿರೋಧದ ನಡುವೆ ಅಂತರ್ಜಾತಿ ವಿವಾಹ- ಠಾಣೆ ಮೆಟ್ಟಿಲೇರಿದ ಜೋಡಿ
Web Stories