ಶಿವಮೊಗ್ಗ: ಜಿಲ್ಲೆಯ ರಾಗಿಗುಡ್ಡದಲ್ಲಿ (Ragigudda) ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone Pelting) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ (Shivamogga) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ಇಡೀ ನಗರಕ್ಕೆ ನಿಷೇಧಾಜ್ಞೆ ಹೇರಿರುವುದಕ್ಕೆ ವರ್ತಕರು ಹಾಗೂ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ಮಧ್ಯಾಹ್ನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮೆರವಣಿಗೆ ಹಮ್ಮಿಕೊಂಡಿದ್ದರು. ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ವಿವಿಧೆಡೆಗಳಿಂದ ಗಾಂಧಿ ಬಜಾರಿಗೆ ಮುಸ್ಲಿಂ ಬಾಂಧವರು ಆಗಮಿಸಿದ್ದರು. ಅದರಂತೆ ರಾಗಿಗುಡ್ಡದಿಂದಲೂ ಮೆರವಣಿಗೆ ಹೊರಡಲು ಮುಸ್ಲಿಂ ಬಾಂಧವರು ಸಿದ್ಧರಾಗಿದ್ದರು.
ಈ ವೇಳೆ ಮೆರವಣಿಗೆ ಸಾಗುವಾಗ ಮುಸ್ಲಿಂ ಬಾಂಧವರ ಗುಂಪಿನ ಮೇಲೆ ಕಲ್ಲು ತೂರಿ ಬಂದಿದೆ. ಇಷ್ಟೇ ಸಾಕಿತ್ತು ಶಿವಮೊಗ್ಗದಲ್ಲಿ ಕೋಮು ಭಾವನೆ ಕೆರಳಲು. ಮುಸ್ಲಿಂ ಗುಂಪಿನ ಮೇಲೆ ಕಲ್ಲು ತೂರಿ ಬರುತ್ತಿದ್ದಂತೆ ಪ್ರತಿಯಾಗಿ ಮುಸ್ಲಿಂಮರು ಕಲ್ಲು ತೂರಾಟ ನಡೆಸೇ ಬಿಟ್ಟಿದ್ದರು.
ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಚಾರ್ಜ್ ನಡೆಸಿದರು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದರು. ಆದರೆ ಜಿಲ್ಲಾಡಳಿತ ಘಟನೆ ನಡೆದ ರಾಗಿಗುಡ್ಡದಲ್ಲಿ ಮಾತ್ರ 144 ನಿಷೇಧಾಜ್ಞೆ ಜಾರಿಗೊಳಿಸದೇ ಇಡೀ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ 144 ಸೆಕ್ಷನ್ ಜಾರಿಗೊಳಿದೆ. ಇಡೀ ನಗರ ಪ್ರದೇಶದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿದ್ದಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಓಂ ಗಣಪತಿ ವಿಸರ್ಜನೆ, ಈದ್ ಮಿಲಾದ್ ಮೆರವಣಿಗೆ ಎಂದು ಕಳೆದ 3-4 ದಿನಗಳಿಂದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದೀಗ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸುವುದು ಎಷ್ಟು ಸರಿ ಎಂದು ವರ್ತಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ
ಪೊಲೀಸರು ಹಾಗೂ ಜಿಲ್ಲಾಡಳಿತ ಘಟನೆ ನಡೆದ ರಾಗಿಗುಡ್ಡದಲ್ಲಿ ಮಾತ್ರ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸದೇ, ಈಡಿ ಶಿವಮೊಗ್ಗ ನಗರ ಪ್ರದೇಶಕ್ಕೆ ಜಾರಿಗೊಳಿಸಿರುವ ಹಿಂದೆ ಪೊಲೀಸರ ಮುಂಜಾಗ್ರತಾ ಕ್ರಮವೇ ಅಡಗಿದೆ. ರಾಗಿಗುಡ್ಡದಲ್ಲಿ ಘಟನೆ ಆಗಿದೆ ಅಂತಾ ಸುಮ್ಮನೆ ಕೈಕಟ್ಟಿ ಕುಳಿತುಕೊಂಡರೆ, ಇದು ಹೇಳಿ ಕೇಳಿ ಶಿವಮೊಗ್ಗ. ಸಣ್ಣ ವಿಷಯವು ದೊಡ್ಡದಾಗಿ ಇಡೀ ನಗರವನ್ನು ವ್ಯಾಪಿಸಿಕೊಳ್ಳುತ್ತದೆ. ಹೀಗಾಗಿ ಜಿಲ್ಲಾಡಳಿತ ಇಡೀ ಮಹಾನಗರ ಪಾಲಿಕೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿರುವುದಕ್ಕೆ ಬಿಜೆಪಿ ಮುಖಂಡರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆ ಎಲ್ಲಿ ನಡೆದಿದೆಯೋ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ವಿನಾಃ ಕಾರಣ ಎಲ್ಲರಿಗೂ ತೊಂದರೆ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗವನ್ನ ಮತ್ತೊಂದು ಪಾಕಿಸ್ತಾನ ಮಾಡಲು ಸಂಚು ಮಾಡಿದ್ದಾರೆ: ಸಿ.ಟಿ ರವಿ
ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 24 ಪ್ರಕರಣಗಳನ್ನು ದಾಖಲಿಸಿಕೊಂಡು, 60 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸದ್ಯ ಶಿವಮೊಗ್ಗದ ಪರಿಸ್ಥಿತಿ ಶಾಂತವಾಗಿ.
Web Stories