ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಮಹಿಳೆ ಮೇಲೆ ನಡೆಸಿದ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸಿಎಂ ಕಚೇರಿ ಸಿಬ್ಬಂದಿ, ಮಹಿಳೆಯ ನೆರವಿಗೆ ಧಾವಿಸಿದೆ.
ಇಂದು ಬೆಳಗ್ಗೆ ಮೀಟರ್ ಬಡ್ಡಿ ದಂಧೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೃತ್ಯವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬಗ್ಗೆ ಸಿಎಂ ಕಚೇರಿ ಸಿಬ್ಬಂದಿ ಪಬ್ಲಿಕ್ ಟಿವಿಗೆ ಕರೆ ಮಾಡಿ ಮಹಿಳೆಯ ಮೊಬೈಲ್ ಪಡೆದಿದ್ದಾರೆ. ಕೂಡಲೇ ಮಹಿಳೆಗೆ ಕರೆ ಮಾಡಿ ನಾವಿದ್ದೀವಿ ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೇ 11 ಗಂಟೆಗೆ ಸಿಎಂ ಗೃಹ ಕಚೇರಿಗೆ ಬರುವಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಅಂತ ಹೇಳಿದ್ದಾರೆ.
ಅಲೋಕ್ ಕುಮಾರ್ ಸಮ್ಮುಖದಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು ಬಡ್ಡಿ ದಂಧೆ ಕೋರರ ವಿರುದ್ಧ ಕ್ರಮಕೈಗೊಳ್ಳುವ ಸೂಚನೆ ನೀಡಿದ್ದಾರೆ. ಖುದ್ದು ಕುಮಾರಸ್ವಾಮಿ ಅವರೇ ಮಹಿಳೆಯ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ನಡೆದಿದ್ದೇನು?
ಮೀಟರ್ ಬಡ್ಡಿ ಗ್ಯಾಂಗ್ ಬಡ್ಡಿ ದುಡ್ಡುಕೊಡಲಿಲ್ಲ ಅಂತ ಮಹಿಳೆಯನ್ನು ಮನೆಯಲ್ಲಿಯೇ ಕೂಡಿ ಹಾಕಿ ತಂದೆ ಮುಂದೆನೇ ಲೈಂಗಿಕ ಕಿರುಕುಳ ನೀಡಿದ್ದರು. ಮತ್ತಿಕೆರೆ 
ಇತ್ತ ಪ್ರಕಾಶ್ ಮತ್ತು ವೇದಾಂತ್, ಮಗನನ್ನ ಕಿಡ್ನಾಪ್ ಮಾಡ್ತೀವಿ ಅಂತ ಮೊಬೈಲಿನಲ್ಲಿ ಮೆಸೇಜ್ ಹಾಕಿ ಮನಬಂದಂತೆ ಏಕ ವಚನದಲ್ಲಿ ಬೈದಿದ್ದರು. ಮಗ ದೀಪಕ್ ಯಾವ ಕಾಲೇಜಿಗೆ ಹೋಗುವುದು ಗೊತ್ತು. ಸುಮ್ಮನೆ ಅವನ ಭವಿಷ್ಯ ಹಾಳುಮಾಡಬೇಡಿ ಮರ್ಯಾದೆಯಿಂದ ಸೆಟ್ಲ್‍ಮೆಂಟ್ ಮಾಡಿ. ನೀವು ಎಲ್ಲಿದ್ದರೂ ಬಿಡಲ್ಲ ನಮ್ಮದು 12 ಲಕ್ಷ ರೂ. ಕೊಡಬೇಕು ಎಂದಿದ್ದರು. ಅಲ್ಲದೇ ಪ್ರಕಾಶ್ ಮತ್ತು ವೇದಾಂತ್, ನನ್ನ ಪತಿಗೆ ಕಾಲ್ ಮಾಡಿ ಕೆಟ್ಟದಾಗಿ ಬೈದಿದ್ದಾರೆ ಎಂದು ನೊಂದ ಮಹಿಳೆ ದೂರಿದ್ದರು.
ವೇದಾಂತ್ ಹಾಗೂ ಪ್ರಕಾಶ್ ವಿರುದ್ಧ ನೊಂದ ಮಹಿಳೆ ಮತ್ತು ಪತಿ ಸೋಲದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=iEYZexISgIo




