– ಶ್ರೀ ಮರುಧರ್ ಕೇಸರಿ ಜೆಎನ್ ಭಕ್ತಗಣ್ ಸಂಘಟನೆಯ ಕಾರ್ಯದರ್ಶಿ ಗೌತಮ್ ಚಾಂದ್ ಜೈನ್ ನೇತೃತ್ವ
ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಡೆಸುತ್ತಿರುವ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಗೆ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬರು ನಿಮ್ಹಾನ್ಸ್ ನಲ್ಲಿ ರೋಗಿಗಳಿಗೆ ಹಾಗೂ ಅವರ ಜೊತೆ ಬಂದಿರುವ ಸಂಬಂಧಿಕರಿಗೆ ಊಟದ ಸಮಸ್ಯೆ ಎದುರಾಗಿದೆ. ದಯವಿಟ್ಟು ಊಟದ ವ್ಯವಸ್ಥೆ ಮಾಡಿ ಕೊಡಿ ಎಂದು ಮನವಿ ಮಾಡಿದ್ದರು.
Advertisement
ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ನೋಡಿದ ತಕ್ಷಣ ಶ್ರೀ ಮರುಧರ್ ಕೇಸರಿ ಜೆಎನ್ ಭಕ್ತಗಣ್ ಸಂಘಟನೆಯ ಕಾರ್ಯದರ್ಶಿ ಗೌತಮ್ ಚಾಂದ್ ಲುನಾವತ್ ನಮ್ಮ ಕಚೇರಿಗೆ ಫೋನ್ ಮಾಡಿ ನಿಮ್ಹಾನ್ಸ್ ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದರು. ನಿನ್ನೆ ಕೊಟ್ಟ ಭರವಸೆಯಂತಯೇ ಇಂದು ನಿಮ್ಹಾನ್ಸ್ ರೋಗಿಗಳಿಗೆ ಸಂಘಟನೆ ವತಿಯಿಂದ ಊಟ ವಿತರಿಸಿದರು.
Advertisement
Advertisement
ಊಟದ ಪೊಟ್ಟಣ ವಿತರಿಸಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಧ್ಯಕ್ಷ ಉತ್ತಮ್ ಚಂದ್ ರತಾಡಿಯಾ ಹಾಗೂ ಕಾರ್ಯದರ್ಶಿ ಗೌತಮ್ ಚಾಂದ್ ಲುನಾವತ್, ಪಬ್ಲಿಕ್ ಟಿವಿಯ ಮೂಲಕ ನಿಮ್ಹಾನ್ಸ್ ಆಸ್ಪತ್ರೆಯ ರೋಗಿಗಳಿಗೆ ಊಟ ಸಿಗ್ತಿಲ್ಲ ಅನ್ನೋದು ಗೊತ್ತಾಯ್ತು. ಕೂಡಲೇ ಅಲ್ಲಿನ ಜನ್ರಿಗೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೂ ಊಟ ವಿತರಣೆ ಮಾಡಲು ಮುಂದಾಗಿದ್ದೇವೆ. ಶ್ರೀ ಮರುಧರ್ ಕೇಸರಿ ಜೆಎನ್ ಭಕ್ತಗಣ್ ಸಂಘಟನೆಯಿಂದ ದಿನಕ್ಕೆ ಮೂರು ಸಾವಿರ ಜನರಿಗೆ ಊಟ ವಿತರಣೆ ಮಾಡೋದಾಗಿ ಹೇಳಿದರು.
Advertisement
ನಿಮ್ಹಾನ್ಸ್ ನಲ್ಲಿ ಊಟ ವಿತರಣೆ ಬಳಿಕ ಸಂಘಟನೆಯ ಸದಸ್ಯರು, ಶಾಂತಿನಗರದಲ್ಲಿ ಊಟವಿಲ್ಲದೇ ರಸ್ತೆ ಬದಿಯಲ್ಲಿ ನಿಂತಿದ್ದ ಜನರಿಗೆ ಊಟ ವಿತರಿಸಿದರು. ಬಳಿಕ ರಾಜಾಜಿನಗರ ಇಎಸ್‍ಐ ಹಾಸ್ಪಿಟಲ್‍ನಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿರೂ ಊಟದ ಪೊಟ್ಟಣ ವಿತರಿಸಲಾಯಿತು.