ಚಂಡೀಗಢ: ಪಂಜಾಬ್‌ಗೆ ಚಂಡೀಗಢವನ್ನು ವರ್ಗಾಯಿಸುವಂತೆ ಕೋರಿ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ. ಚಂಡೀಗಢದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯಿಂದ ರಾಜಕೀಯ ಗದ್ದಲದ ನಡುವೆ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಯಿತು.
Advertisement
ಈ ಅಧಿವೇಶನದಲ್ಲಿ ಚಂಡೀಗಢವನ್ನು ತಕ್ಷಣವೇ ಪಂಜಾಬ್‌ಗೆ ವರ್ಗಾಯಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ಣಯ ಮಂಡಿಸಿದ್ದಾರೆ. ಜೊತೆಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೇವಲ 1 ರೂ. ಸಂಬಳ ತೆಗೆದುಕೊಳ್ಳುತ್ತೇನೆ: ಪಂಜಾಬ್‌ನ ಹೊಸ ಅಡ್ವೊಕೇಟ್ ಜನರಲ್
Advertisement
Advertisement
ಮಾನ್ ನಿರ್ಣಯ ಏನು?
ಚಂಡೀಗಢದ ಆಡಳಿತದ ಸಮತೋಲನ ಮತ್ತು ಇತರ ಸಾಮಾನ್ಯ ಆಸ್ತಿಗಳಿಗೆ ಭಂಗ ತರುವಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ಪಂಜಾಬ್ ಅನ್ನು ಪಂಜಾಬ್ ಮರುಸಂಘಟನೆ ಕಾಯ್ದೆ-1966ರ ಮೂಲಕ ಮರುಸಂಘಟಿಸಲಾಯಿತು. ಇದರಲ್ಲಿ ಪಂಜಾಬ್ ಅನ್ನು ಹರಿಯಾಣ ರಾಜ್ಯವಾಗಿ ಮರುಸಂಘಟಿಸಲಾಯಿತು. ಚಂಡೀಗಢದ ಕೇಂದ್ರಾಡಳಿತ ಪ್ರದೇಶ ಮತ್ತು ಪಂಜಾಬ್‌ನ ಕೆಲವು ಭಾಗಗಳನ್ನು ಅಂದಿನ ಕೇಂದ್ರಾಡಳಿತ ಪ್ರದೇಶವಾದ ಹಿಮಾಚಲ ಪ್ರದೇಶಕ್ಕೆ ನೀಡಲಾಯಿತು. ಸೌಹಾರ್ದತೆ ಕಾಪಾಡಲು ಮತ್ತು ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಚಂಡೀಗಢವನ್ನು ತಕ್ಷಣವೇ ಪಂಜಾಬ್‌ಗೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ವಿಷಯ ಪ್ರಸ್ತಾಪಿಸಲು ಈ ಸದನವು ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ ಎಂದು ನಿರ್ಣಯ ಮಂಡಿಸಲಾಯಿತು. ಇದನ್ನೂ ಓದಿ: ಉಡ್ತಾ ಪಂಜಾಬ್ ಅಲ್ಲ, ಪ್ರಗತಿಪರ ಪಂಜಾಬ್: ಭಗವಂತ್ ಮಾನ್
Advertisement
ಚಂಡೀಗಢ ನಗರವನ್ನು ಪಂಜಾಬ್‌ನ ರಾಜಧಾನಿಯಾಗಿ ರಚಿಸಲಾಗಿದೆ. 1966ರಲ್ಲಿ ಹಿಂದಿ ಮಾತನಾಡುವ ಪ್ರದೇಶಗಳನ್ನು ಒಳಗೊಂಡಿರುವ ಪಂಜಾಬ್‌ನಿಂದ ಹರಿಯಾಣವನ್ನು ಬೇರ್ಪಡಿಸಿದ ನಂತರ ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಯಿತು ಎಂದು ನಿರ್ಣಯ ಹೇಳಿದೆ.
ಚಂಡೀಗಢದ ಆಡಳಿತವನ್ನು ಯಾವಾಗಲೂ ಪಂಜಾಬ್ ಮತ್ತು ಹರಿಯಾಣದ ಅಧಿಕಾರಿಗಳು 60:40 ಅನುಪಾತದಲ್ಲಿ ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಚಂಡೀಗಢಕ್ಕೆ ಹೊರಗಿನ ಅಧಿಕಾರಿಗಳನ್ನು ನಿಯೋಜಿಸಿದೆ ಮತ್ತು ಚಂಡೀಗಢ ಆಡಳಿತದ ನೌಕರರಿಗೆ ಕೇಂದ್ರ ನಾಗರಿಕ ಸೇವಾ ನಿಯಮಗಳನ್ನು ಪರಿಚಯಿಸಿದೆ. ಇದು ಹಿಂದಿನ ತಿಳುವಳಿಕೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಮಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ `ಆಪ್’ ಸುನಾಮಿಗೆ ಕಾಂಗ್ರೆಸ್ ತತ್ತರ- ಚನ್ನಿ, ಸಿಧು, ಕ್ಯಾಪ್ಟನ್‍ಗೆ ಹೀನಾಯ ಸೋಲು
ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಂಡೀಗಢ ಆಡಳಿತದ ನೌಕರರು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಅವರ ಸಹವರ್ತಿಗಳಿಗೆ ಸಮಾನವಾದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಘೋಷಿಸಿದ ನಂತರ ಇತ್ತೀಚಿನ ಪಂಜಾಬ್ ಹಾಗೂ ಕೇಂದ್ರದ ನಡುವೆ ವೈಮನಸ್ಯ ಶುರುವಾಗಿದೆ. ಇದು ಚಂಡೀಗಢದ ಮೇಲಿನ ಪಂಜಾಬ್‌ನ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಪಂಜಾಬ್ ರಾಜ್ಯದ ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಮುಖ್ಯವಾಗಿ ಎಎಪಿ ಅಧಿಕಾರಕ್ಕೆ ಬಂದ ನಂತರ ಇದು ಬಿಜೆಪಿಯ ಮೊದಲ ಬೆದರಿಕೆಯ ಕರೆ ಎಂದು ಹೇಳಿಕೊಂಡಿದ್ದು, ಕಾಂಗ್ರೆಸ್, ಅಕಾಲಿಕ ದಳ ಕೂಡ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.