ಮಡಿಕೇರಿ: ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಹಾನಿಗೊಂಡಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
Advertisement
ಮಳೆಯಿಂದ ಬೆಳೆ ನಷ್ಟವಾಗಿರುವ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆಬ್ಬಾಲೆ ಮತ್ತು ಮಣಜೂರುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಗೆ ಸಂಪೂರ್ಣ ಹಾಳಾಗಿರುವ ಮೆಕ್ಕೆಜೋಳ, ಭತ್ತ ಮತ್ತು ಶುಂಠಿ ಬೆಳೆಗಳನ್ನು ಪರಿಶೀಲಿಸಿದರು. ಬಳಿಕ ಕುಶಾಲನಗರದಲ್ಲಿ ಜಿಲ್ಲಾಧಿಕಾರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಆರ್.ಅಶೋಕ್ ತಕ್ಷಣವೇ ಸರ್ವೇ ನಡೆಸಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದನ್ನೂ ಓದಿ: ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ
Advertisement
ಈ ವೇಳೆ ಮಾತನಾಡಿದ ಅವರು, ಮನೆ ಸಂಪೂರ್ಣ ಬಿದ್ದು ಹೋಗಿರುವವರಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು. ಭಾಗಶಃ ಮನೆ ಬಿದ್ದಿದ್ದರೆ ಅವರಿಗೆ 3 ಲಕ್ಷ ಹಾಗೂ ನೀರು ನುಗ್ಗಿದ್ದರೆ ಅಂತಹ ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಸಂಪೂರ್ಣ ಅಥವಾ ಭಾಗಶಃ ಮನೆ ಬಿದ್ದು ಹೋಗಿರುವವರಿಗೆ ಕೂಡಲೇ ಒಂದು ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯ ಮನವಿ
Advertisement
Advertisement
ಕೊಡಗು ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ ಕಾಫಿ ಬೆಳೆ ನಷ್ಟವಾಗಿದೆ. ಹಾಗೆಯೇ ಭತ್ತ, ಜೋಳ ಸೇರಿದಂತೆ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಹಾಳಾಗಿವೆ. 140 ಮನೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ 14 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ರಾಜ್ಯದಲ್ಲಿ ಅಪಾರ ಪ್ರಮಾಣದ ರಾಗಿ ಬೆಳೆ ನಷ್ಟವಾಗಿದೆ. ಒಟ್ಟಿನಲ್ಲಿ ಮೂಲಸೌಕರ್ಯಕ್ಕಾಗಿ ಈಗಾಗಲೇ 500 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.