– ಎರಡು ಮಕ್ಕಳ ತಾಯಿಯನ್ನು ಬಿಡಲಿಲ್ಲ
ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ಇಮ್ಮಡಿ ಮಹದೇವ ಸ್ವಾಮೀಜಿ ಅಲಿಯಾಸ್ ಚಿಕ್ಕ ಬುದ್ದಿಯ ಮತ್ತೊಂದು ರಂಗಿನಾಟ ಬೆಳಕಿಗೆ ಬರುತ್ತಿವೆ.
ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಎರಡು ಮಕ್ಕಳ ತಾಯಿಯನ್ನ ಮಹದೇವ ಸ್ವಾಮಿ ಕರೆದುಕೊಂಡು ಹೋಗಿದ್ದನು ಎಂದು ತಿಳಿದು ಬಂದಿದೆ. ಹನೂರು ತಾಲೂಕಿನ ಗ್ರಾಮವೊಂದರ ಮಹಿಳೆ ಎರಡು ಮಕ್ಕಳನ್ನ ಕಟ್ಟಿಕೊಂಡು ಸಂಸಾರ ನಡೆಸಲು ಪರದಾಡುತ್ತಿದ್ದಳು. ಆಗ ಈ ಸ್ವಾಮೀಜಿ ಆಕೆಯನ್ನು ಕರೆದುಕೊಂಡು ಹೋಗಿ ಕೊಳ್ಳೇಗಾಲ ಪಟ್ಟಣದ ಬಡಾವಣೆಯಲ್ಲಿ ಇಟ್ಟು ಸಾಕುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!
Advertisement
Advertisement
ಈ ಸಂಬಂಧ ಕಳೆದ ಆರು ತಿಂಗಳ ಹಿಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಸ್ವಾಮೀಜಿ ಬಗ್ಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಆರು ತಿಂಗಳಲ್ಲಿ ಮೂರು ಬಾರಿ ದೂರು ಕೊಟ್ಟರು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಈ ಸ್ವಾಮೀಜಿಯ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯ ಪೋಷಕರು ಗುರುವಾರ ಮೂರನೇ ಬಾರಿಗೆ ಸ್ವಾಮೀಜಿ ಬಗ್ಗೆ ವಿರುದ್ಧ ದೂರು ನೀಡಿದ್ದಾರೆ. ಆದರೆ ಈ ವೇಳೆ ಪೊಲೀಸರು ಇನ್ನು ಎರಡು ದಿನ ಸುಮ್ಮನಿರುವಂತೆ ಹೇಳಿ ಕಳುಹಿಸಿದ್ದಾರೆ.
Advertisement
ಈ ಹಿಂದೆ ಮಹದೇವ ಸ್ವಾಮೀಜಿ ಐವರು ಮಹಿಳೆಯರ ಸಹವಾಸ ಹೊಂದಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಸಾಲೂರು ಮಠದ ಪಕ್ಕದ ಗ್ರಾಮದ ಮಂಜುಳಾ ಎಂಬ ಮಹಿಳೆ ವಾರಕ್ಕೆ ಎರಡು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದಳಂತೆ. ಸರ್ಕಾರಿ ಶಾಲೆಯ ಟೀಚರ್ ಮಹದೇವಮ್ಮ ಭಾನುವಾರ ಮಿಸ್ ಮಾಡುತ್ತಿರಲಿಲ್ಲ. ಒಂದು ವೇಳೆ ಇವರಿಬ್ಬರು ಮಠಕ್ಕೆ ಬರದಿದ್ದರೆ ಮಹದೇವನೇ ಫೋನ್ ಮಾಡಿ ಕರೆಸುತ್ತಿದ್ದನಂತೆ. ಸರ್ಕಾರಿ ರಜೆ ಬಂದರೆ ಸಾಕು ಟೀಚರ್ ಮಿಸ್ ಮಾಡ್ದೆ ಮಠಕ್ಕೆ ಹಾಜರಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹದೇವ ಸ್ವಾಮೀಜಿ ಪ್ರಕರಣದಲ್ಲಿ ಬಂಧಿತಳಾಗಿರುವ ಎ2 ಆರೋಪಿ ಅಂಬಿಕಾಳೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಾನೆ.
Advertisement
ವಿಷ ಪ್ರಸಾದ ಪ್ರಕರಣದಲ್ಲಿ ಈವರೆಗೆ ಒಬ್ಬಳು ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 16 ಜನ ಮೃತಪಟ್ಟಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಕೆಲಸ ಮಾಡುತ್ತಿದೆ.
https://www.youtube.com/watch?v=WP4XJddApD4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv