2025ರ ಮೋಸ್ಟ್ ಪಾಪುಲರ್ ಇಂಡಿಯನ್ ಸ್ಟಾರ್ ಐಎಂಡಿಬಿ (IMDB) ಬಿಡುಗಡೆ ಮಾಡಿರುವ ರೇಟಿಂಗ್ಸ್ ಪಟ್ಟಿಯಲ್ಲಿ ಕನ್ನಡದ ಮೂವರು ತಾರೆಯರಿಗೆ ಟಾಪ್-10 ರಲ್ಲಿ ಸ್ಥಾನ ಸಿಕ್ಕಿದೆ.

ಕನ್ನಡದ ಮೂವರು ತಾರೆಯರಾದ ರಶ್ಮಿಕಾ ಮಂದಣ್ಣ (Rashmika Mandanna), ರುಕ್ಮಿಣಿ ವಸಂತ್ (Rukmini Vasanth) ಹಾಗೂ ರಿಷಬ್ ಶೆಟ್ಟಿಗೆ (Rishab Shetty) ಸ್ಥಾನ ದೊರಕಿದೆ. ರಶ್ಮಿಕಾ ಮಂದಣ್ಣ ಟಾಪ್-6, ರುಕ್ಮಿಣಿ ವಸಂತ್ ಟಾಪ್-9 ಹಾಗೂ ರಿಷಬ್ ಶೆಟ್ಟಿ ಅವರಿಗೆ ಟಾಪ್-10ನೇ ಸ್ಥಾನವನ್ನ ಐಎಂಡಿಬಿ ನೀಡಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮೊದಲ ಜೋಡಿ ಕ್ಯಾಪ್ಟನ್ – ಟಾಸ್ಕ್ ಆಡದೇ ಕ್ಯಾಪ್ಟನ್ ಆದ ಸ್ಪಂದನಾ

ಐಎಂಡಿಬಿ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ನಟರನ್ನ ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳ ಮೂಲಕ ಇಡೀ ವಿಶ್ವದ ಗಮನಸೆಳೆದು ತನ್ನತ್ತ ನೋಡುವಂತೆ ಮಾಡಿದೆ ಕನ್ನಡ ಚಿತ್ರರಂಗ. ಪ್ರತಿವರ್ಷ ಐಎಂಡಿಬಿಯು ಭಾರತೀಯ ಪಾಪುಲರ್ ಸ್ಟಾರ್‌ಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಅದರಲ್ಲಿ ಆ ವರ್ಷ ಹೆಚ್ಚು ಪ್ರಖ್ಯಾತಿ ಪಡೆದ ತಾರೆಯರ ಪಟ್ಟಿಗೆ ಕನ್ನಡದ ಮೂವರು ನಟರು ಟಾಪ್-10ರಲ್ಲಿ ಸ್ಥಾನ ಪಡೆದಿರೋದು ಕನ್ನಡಕ್ಕೆ ಮತ್ತೊಂದು ಹೆಮ್ಮೆ. ಇದನ್ನೂ ಓದಿ: ʻದಾಸʼನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು ಎಂದ ದರ್ಶನ್

ರಶ್ಮಿಕಾ ಮಂದಣ್ಣ ತಮ್ಮ ವಿಭಿನ್ನ ಪ್ರಯತ್ನದ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಗಮನಸೆಳೆದಿದ್ದಾರೆ. ಇನ್ನು ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ಇಡೀ ದೇಶದ ಗಮನ ಸೆಳೆದಿರುವ ರುಕ್ಮಿಣಿ ವಸಂತ್ ಹಾಗೂ ರಿಷಬ್ ಶೆಟ್ಟಿ ಐಎಂಡಿಬಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ 1ನೇ ಸ್ಥಾನದಲ್ಲಿ ಸೈಯಾರಾ ಸಿನಿಮಾದ ನಾಯಕ ಅಹಾನ್ ಪಾಂಡೆ, ನಾಯಕಿ ಅನೀತ್ ಪಡ್ಡ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಆಮೀರ್ ಖಾನ್, 4ನೇ ಸ್ಥಾನದಲ್ಲಿ ಇಶಾನ್ ಖಟ್ಟರ್, 5ನೇ ನಟನಾಗಿ ಲಕ್ಷ್ಮಯ್ಯ, 6ನೇ ಸ್ಥಾನದಲ್ಲಿ ಕಲ್ಯಾಣಿ ಪ್ರಿಯದರ್ಶನ್, 8ನೇ ಸ್ಥಾನದಲ್ಲಿ ತೃಪ್ತಿ ದಿಮ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಪಾನ್‌ನಲ್ಲಿ `ಬಾಹುಬಲಿ ದಿ ಎಪಿಕ್’ ರಿಲೀಸ್ – ಯಾವಾಗ ಗೊತ್ತಾ..?

