ಗಾಂಧಿನಗರ: ಮುಂಬೈ, ಮಹಾರಾಷ್ಟ್ರದ ಬಳಿಕ ಗುಜರಾತ್‌ನಲ್ಲೂ ಮಳೆಯ ಆರ್ಭಟ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗುಜರಾತಿನ 8 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
Advertisement
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಮುಂಬೈ ಮತ್ತು ಅದರ ಉಪನಗರಗಳಲ್ಲಿ ಸಾಧಾರಣದಿಂದ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಉಡುಪಿ ಹಿಸ್ಟರಿಯಲ್ಲೇ ಇದೊಂದು ಖತರ್ನಾಕ್ ಕ್ರೈಂ- ತಪ್ಪಿಸಿಕೊಳ್ಳಲು ಮಾಡಿದ್ದ ಪ್ಲಾನ್‍ನಿಂದಲೇ ಸಿಕ್ಕಿಬಿತ್ತು ಜೋಡಿ
Advertisement
Gujarat | Several parts of Ahmedabad face waterlogging as rainfall continues to lash the city. Visuals from Vejalpur and Shrinand Nagar in Ahemdabad. pic.twitter.com/7Y0yxKAb3X
— ANI (@ANI) July 14, 2022
Advertisement
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಿನ್ನೆ ನಾಲ್ವರು ಮೃತಪಟ್ಟಿದ್ದಾರೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಒಟ್ಟು ಮಳೆಯ ಪ್ರಮಾಣ ಶೇ.99 ತಲುಪಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಜೂನ್ 1 ರಂದು ಮುಂಗಾರು ಋತುವಿನ ಆರಂಭವನ್ನು ತೆಗೆದುಕೊಂಡು ಮಳೆ ಹಾನಿಯನ್ನು ಅಂದಾಜಿಸಲಾಗಿದೆ.
Advertisement
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟು 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು 6 ರಾಜ್ಯ ವಿಪತ್ತು ನಿರ್ವಹಣಾ ಪಡೆಗಳನ್ನು (ಎಸ್‌ಡಿಆರ್‌ಎಫ್) ನಿಯೋಜಿಸಲಾಗಿದೆ. ಇವು ಮಳೆಹಾನಿ ಪ್ರದೇಶಗಳಿಗೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಉಡುಪಿ ಹಿಸ್ಟರಿಯಲ್ಲೇ ಇದೊಂದು ಖತರ್ನಾಕ್ ಕ್ರೈಂ- ತಪ್ಪಿಸಿಕೊಳ್ಳಲು ಮಾಡಿದ್ದ ಪ್ಲಾನ್‍ನಿಂದಲೇ ಸಿಕ್ಕಿಬಿತ್ತು ಜೋಡಿ
Maharashtra | The road connecting Maharashtra and Telangana was inundated due to the rising level of Wardha river. Flood-like situation in several parts of Chandrapur city (14.07) pic.twitter.com/osyOMlB1KH
— ANI (@ANI) July 15, 2022
ಗುಜರಾತ್‌ನಲ್ಲಿ ರೆಡ್ ಅಲರ್ಟ್: ಇಲ್ಲಿನ ಸೂರತ್, ಜುನಾಗಢ್, ಗಿರ್, ಭಾವನಗರ, ತಾಪಿ, ದಂಗ್, ವಲ್ಸಾದ್ ಮತ್ತು ನವಸರ್ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಗುಜರಾತ್‌ನ ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮೋದಕ್ ಸಾಗರ್ ಮತ್ತು ತಾನ್ಸಾ ಎರಡೂ ಅಣೆಕಟ್ಟುಗಳಿಂದ ನೀರು ತುಂಬಿ ಹರಿಯುತ್ತಿರುವುದರಿಂದ ಪೂರ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಆದ್ದರಿಂದ ನದಿ ಪಾತ್ರದ ಜನರು ಜಾಗ್ರತೆ ವಹಿಸುವಂತೆ ಜೊತೆಗೆ ವಹಿಸಬೇಕು, ನದಿಗಳಿಗೆ ಇಳಿಯದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.