ಚೆನ್ನೈ: ತಮಿಳುನಾಡು (Tamil Nadu) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರು ಸೋಮವಾರವಷ್ಟೇ ಶ್ರೀಪೆರಂಬದೂರಿನಲ್ಲಿರುವ (Sriperumbudur) ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ್ದರು. ಈ ಕಟ್ಟಡದಲ್ಲಿ ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್‍ಗಳನ್ನು ನಿರ್ಮಿಸಲಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಶ್ರೀಪೆರಂಬದೂರಿನಲ್ಲಿ ತಮಿಳುನಾಡು ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮ (SIPCOT) 1.80 ಕೋಟಿ ರೂಪಾಯಿ ಬಜೆಟ್‍ನಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್‍ಗಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ಡಿಜೆ ಹಾಕಿ ಹಿಂದೂ ವಿರೋಧಿ ಘೋಷಣೆ- ಮಚ್ಚು, ಲಾಂಗ್, ತಲ್ವಾರ್ ಬೀಸಿ ಪುಂಡಾಟ
Advertisement
தொழில், முதலீட்டு ஊக்குவிப்பு மற்றும் வர்த்தகத் துறை சார்பில், கங்கைகொண்டான் சிப்காட் தொழில் பூங்காவில், ரூ. 1.95 கோடி மதிப்பீட்டிலும், பிள்ளைப்பாக்கம் சிப்காட் தொழில் பூங்காவில் ரூ. 1.88 கோடி மதிப்பீட்டிலும் கட்டப்பட்டுள்ள திட்ட மற்றும் நிர்வாக அலுவலகக் கட்டடங்கள்,
1/2 pic.twitter.com/xV60nI8BXY
— CMOTamilNadu (@CMOTamilnadu) October 10, 2022
Advertisement
ಸೋಮವಾರ ಸ್ಟಾಲಿನ್ ಅವರು ಇತರ ಯೋಜನೆಗಳೊಂದಿಗೆ ಈ ಕಟ್ಟಡವನ್ನು ಉದ್ಘಾಟಿಸಿದರು. ಒಂದೇ ಬಾತ್‍ರೂಂನಲ್ಲಿ ಎರಡು ಕಮೋಡ್‍ಗಳಿರುವ ಈ ಆಫೀಸ್ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗೆ ಸುಮಾರು 1.80 ಕೋಟಿ ರೂಪಾಯಿ ಖರ್ಚಾಗಿದೆ. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ
Advertisement
ವೀಡಿಯೋದಲ್ಲಿ ಅರ್ಧಂಬರ್ಧ ಛಾವಣಿಗಳು, ಕಳಪೆ ಸಿಮೆಂಟ್ ಕಾಮಗಾರಿ ಮತ್ತು ಪೀಠೋಪಕರಣಗಳನ್ನು ಹಾಕಿರುವುದನ್ನು ಕಾಣಬಹುದಾಗಿದೆ. ಗಡುವು ಮುಗಿದಿದ್ದರಿಂದ ಕಾಮಗಾರಿಯನ್ನು ಶೀಘ್ರವೇ ಮುಗಿಸಲು ಅಧಿಕಾರಿಗಳು ಯತ್ನಿಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.