ಬೆಂಗಳೂರು: ಐಎಎಂ ಗೋಲ್ಡ್ ಕಂಪನಿ ಮಾಲೀಕ ಮನ್ಸೂರ್ ಖಾನ್ ದೋಖಾ ಪ್ರಕರಣ ಹೊರ ಬರುತ್ತಿದ್ದಂತೆ ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಅಸಲಿಗೆ ಐಎಂಎ ಕಂಪನಿಯ ಮನ್ಸೂರ್ ಟಾರ್ಗೆಟ್ ಮಾಡಿದ್ದು ತನ್ನ ಸಮುದಾಯವರನ್ನೇ ಅನ್ನೋದು ಕುತೂಹಲಕಾರಿಯಾದ ಸಂಗತಿಯಾಗಿದೆ. ಆಭರಣಗಳಲ್ಲಿಯೂ ಮುಸ್ಲಿಂ ಆಭರಣ ಅಂತ ಡಿವೈಡ್ ಮಾಡಿ ಮಾರಾಟ ಮಾಡುತ್ತಿದ್ದನು. ಈತನ ಜ್ಯುವೆಲ್ಲರಿ ಶಾಪ್‍ಗೆ ಮುಸ್ಲಿಂ ಮಹಿಳೆಯರು ಬಿಟ್ಟರೆ ಅನ್ಯ ಧರ್ಮದವರು ಹೋಗುತ್ತಿದ್ದಿದ್ದು ತೀರ ಕಡಿಮೆ. ಇದನ್ನೂ ಓದಿ: ಬೆಂಗ್ಳೂರು ಅಲ್ಲ ರಾಜ್ಯವ್ಯಾಪಿ ಜನರಿಂದ ಐಎಂಎಗೆ ಹಣ ಹೂಡಿಕೆ
ಮುಸ್ಲಿಂ ಮಹಿಳೆಯರನ್ನ ನಯವಾಗಿ ಮಾತನಾಡಿಸಲು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದನು. ನಮ್ಮ ಕಂಪನಿಯಲ್ಲಿ ಇಂತಿಷ್ಟು ಅಂತ ಹಣ ಹೂಡಿಕೆ ಮಾಡಿದರೆ ಕಂಪನಿಯ ಮೆಂಬರ್ ಕಾರ್ಡ್ ನೀಡುತ್ತೇವೆ. ನಿಮಗೆ ಆಭರಣ ಖರೀದಿಯ ಮೇಲೆ ಶೇಕಡಾ 10 ರಷ್ಟು ಡಿಸ್ಕೌಂಟ್ ಜೊತೆಗೆ ಝೀರೋ ಫರ್ಸೆಂಟ್ ಮೇಕಿಂಗ್ ಚಾರ್ಜಸ್ ಮತ್ತು ನಿಮ್ಮ ಹೂಡಿಕೆಗೆ ಶೇಕಡಾ 7 ರಿಂದ 10 ರಷ್ಟು ಬಡ್ಡಿ ಕೊಡುವುದಾಗಿ ನಂಬಿಸಿದ್ದನು. ಈತನ ಸಿಬ್ಬಂದಿ ಮಾತಿಗೆ ಮರುಳಾದ ಬಡ ಮುಸ್ಲಿಂ ಮಹಿಳೆಯರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಈಗ ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್
ಇತ್ತ ಮನ್ಸೂರ್ ಖಾನ್ ಮಾತಿನಲ್ಲೇ ಮನೆ ಕಟ್ಟಿ ಸಾವಿರಾರು ಮಂದಿಯನ್ನು ಯಾಮಾರಿಸಿದ್ದಾನೆ. ನಾನು ವಾಪಸ್ ಬರುತ್ತೀನಿ. ನನ್ನ ಮೇಲೆ ನಂಬಿಕೆ ಇರುವವರು ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಹಣ ನಿಮಗೆ ವಾಪಸ್ಸು ಆಗೇ ಆಗುತ್ತದೆ. ಯಾರಿಗೂ ನಾನು ಮೋಸ ಮಾಡುವುದಿಲ್ಲ. ಅಷ್ಟು ನಂಬಿಕೆ ಇಲ್ಲದವರು ನಿಮ್ಮ ಹಣ ವಾಪಸ್ಸು ಪಡೆದುಕೊಳ್ಳಬಹುದು. ನಾನೊಂದು ದಿನಾಂಕವನ್ನು ಹೇಳುತ್ತೀನಿ ಅವತ್ತು ಹಣ ಪಡೆದುಕೊಳ್ಳಬಹುದು ಎಂದು ಡೈಲಾಗ್ ಮೇಲೆ ಡೈಲಾಗ್ ಹೊಡೆದು ಯಾಮಾರಿಸಿದ್ದನು.