ಬೆಂಗಳೂರು: ಭಾರೀ ಸುದ್ದಿಯಾಗಿದ್ದ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನೆ ವಂಚನೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದೆ.
ಗ್ರಾಹಕರಿಗೆ ವಂಚನೆ ಮಾಡಿರುವ ಸಂಬಂಧ ಎಫ್‌ಐಆರ್‌ನಲ್ಲಿದ್ದ ಆರೋಪಿಗಳ ಹೆಸರು ಚಾರ್ಜ್ ಶೀಟ್‍ನಲ್ಲಿ ಕಣ್ಮರೆಯಾಗಿದೆ. ಚಾರ್ಜ್ ಶೀಟ್‍ನಲ್ಲಿ ಐವರು ಆರೋಪಿಗಳ ಹೆಸರನ್ನು ಸಿಬಿಐ ಕೈಬಿಟ್ಟಿದೆ. ಮಾಜಿ ಡಿಸಿ ವಿಜಯ್‍ಶಂಕರ್, ಎಸಿ ಎಲ್‍ಸಿ ನಾಗರಾಜ್, ಬಿಡಿಎ ಎಂಜಿನಿಯರ್ ಪಿಡಿ ಕುಮಾರ್, ಗ್ರಾಮಲೆಕ್ಕಿಗ ಮಂಜುನಾಥ್ ಹೆಸರು ಐವರು ಹೆಸರು ಇಲ್ಲವಾಗಿದೆ.
ಹೆಸರು ನಾಪತ್ತೆ ಯಾಕೆ..?
ಸರ್ಕಾರಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್‍ಗೆ ಅನುಮತಿ ಬೇಕು. ಐಎಎಸ್ ಮೇಲೆ ಚಾರ್ಜ್ ಶೀಟ್‍ಗೆ ರಾಷ್ಟ್ರಪತಿಗಳ ಅನುಮತಿ ಬೇಕು. ಅಲ್ಲದೆ ಯುಪಿಎಸ್‍ಸಿ ಪರ್ಮೀಷನ್ ಕೂಡ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಎಸಿ ನಾಗರಾಜ್ ಸೇರಿ ಉಳಿದವರ ಚಾರ್ಜ್ ಶೀಟ್‍ಗೂ ರಾಜ್ಯ ಸರ್ಕಾರದ ಅನುಮತಿ ಬೇಕು. ಹೀಗಾಗಿ ಪಿಸಿ ಆ್ಯಕ್ಟ್ ನಡಿ ಸಿಬಿಐ ಸರ್ಕಾರದ ಅನುಮತಿ ಕೇಳಿದೆ. ಸರ್ಕಾರ ಅನುಮತಿ ಕೊಟ್ಟರೆ ಮಾತ್ರ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತದೆ. ಸರ್ಕಾರ ವಿಳಂಬ ಮಾಡಿದಷ್ಟೂ ಆರೋಪಿಗಳು ಬಚಾವಾಗುವ ಸಾಧ್ಯತೆ ಇದೆ.
ಐಎಂಎ ವಂಚನೆ ಪ್ರಕರಣ ಸಂಬಂಧ ಎಸ್‍ಐಟಿ ಅಧಿಕಾರಿಗಳು ಸುಮಾರು 25 ಮಂದಿಯನ್ನು ಬಂಧಿಸಿದ್ದರು. ಆದರೆ ಇದೀಗ ಕೇವಲ 20 ಮಂದಿಯ ಹೆಸರು ಮಾತ್ರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.