ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬುಧವಾರ ಇಡೀ ದಿನ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‍ರನ್ನ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಬೆಳಗ್ಗೆ 11 ರಿಂದ ರಾತ್ರಿ 8.30ರವರೆಗೆ ತನಿಖೆ ವಿಚಾರಣೆ ನಡೆಸಿದ ಎಸ್‍ಐಟಿ ಅಧಿಕಾರಿಗಳು, ಜಮೀರ್ ಅವರಿಂದ ಸಾಕಷ್ಟು ಉತ್ತರ ಪಡೆದುಕೊಂಡಿದ್ದಾರೆ. ವಿಚಾರಣೆಯ ಕೆಲ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅದು ಈ ಕೆಳಗಿನಂತಿದೆ.
ಎಸ್‍ಐಟಿ: ನಿಮ್ಮನ್ನ ವಿಚಾರಣೆಗೆ ಕರೀತೀವಿ ಅಂತ ಅನ್ಕೊಂಡಿದ್ರಾ?
ಜಮೀರ್: ಇ.ಡಿ. ಯವರು ನೋಟಿಸ್ ಕೊಟ್ಟಾಗಲೇ ನೀವು ಕರೀತೀರಾ ಅಂತ ಗೊತ್ತಿತ್ತು.
Advertisement
ಎಸ್‍ಐಟಿ: ನಿಮಗೂ ಮನ್ಸೂರ್ ಖಾನ್‍ಗೂ ಯಾವ ರೀತಿಯ ಸಂಬಂಧ ಇತ್ತು?
ಜಮೀರ್: ನಮ್ಮಿಬ್ಬರ ನಡುವೆ ಯಾವುದೇ ವೈಯಕ್ತಿಕ ಸಂಬಂಧಗಳಿಲ್ಲ. ಇಫ್ತಿಯಾರ್ ಕೂಟದ ಸಮಯದಲ್ಲಿ ಸಿಕ್ತಿದ್ರು.
Advertisement
Advertisement
ಎಸ್‍ಐಟಿ: ಮನ್ಸೂರ್ ನಿಂದ ನೀವು ಹಣ ಪಡೆದಿದ್ದೀರಂತಲ್ಲ?
ಜಮೀರ್: ಎಸ್‍ಐಟಿ ರಚನೆ ಮಾಡಿ ಅಂತ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇ ನಾನು. ನಾನ್ಯಾಕೆ ಮನ್ಸೂರ್ ನಿಂದ ಹಣ ಪಡೆಯಲಿ
Advertisement
ಎಸ್‍ಐಟಿ: ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮನ್ಸೂರ್ ಗೆ ನಿವೇಶನ ಮಾರಿದ್ಯಾಕೆ?
ಜಮೀರ್: ರಿಚ್ಮಂಡ್ ಟೌನ್‍ನ ಸರ್ಫೆಂಟೈನ್ ರಸ್ತೆಯಲ್ಲಿರೋ ನಿವೇಶನವನ್ನು ಸೇಲ್‍ಡೀಡ್ ಮಾಡಿ 9 ಕೋಟಿ ಹಣ ಪಡೆದಿದ್ದೇನೆ. ಈಗ ನನಗೂ ಕಡಿಮೆ ಬೆಲೆಗೆ ಮಾರಿದ್ದೀನಿ ಅನ್ನಿಸ್ತಿದೆ.
ಎಸ್‍ಐಟಿ: ನಿಮ್ಮ ಶಿಷ್ಯ ಮುಜಾಹಿದ್ ಅಲಿಯಾಸ್ ಖರ್ಚೀಫ್ ಮಜ್ಜು, ಮನ್ಸೂರ್ ನಿಂದ ಹಣ ಪಡೆದಿದ್ದಾನಲ್ಲ?
ಜಮೀರ್: ಅದಕ್ಕೂ ನನಗೂ ಸಂಬಂಧವಿಲ್ಲ.
ಎಸ್‍ಐಟಿ: ರಾಜಕಾರಣಿಗಳಲ್ಲಿ ಮನ್ಸೂರ್ ನಿಮಗೂ ಹಣ ತಲುಪಿಸಿದ್ದಾನಂತಲ್ಲ?
ಜಮೀರ್: ಇದೆಲ್ಲಾ ಸುಳ್ಳು. ಬಡ ಜನರ ದುಡ್ಡು ವಾಪಸ್ ಕೊಡು ನಿನ್ನ ಬೆಂಬಲಕ್ಕೆ ಇರ್ತೀನಿ ಅಂತಾ ಹೇಳಿದ್ದು ನಿಜ. ಅವನಿಂದ ಯಾವುದೇ ದುಡ್ಡು ಪಡೆದಿಲ್ಲ.
ಎಸ್‍ಐಟಿ: ಮೌಲ್ವಿ ಹನೀಫ್ ಅಪ್ಸರ್ ಅಜೀಜ್‍ಗೂ ನಿಮಗೂ ಏನು ಸಂಬಂಧ?
ಜಮೀರ್: ಯಾವುದೇ ಸಂಬಂಧ ಇಲ್ಲ. ನೀವು ಅರೆಸ್ಟ್ ಮಾಡಿದಾಗಲೇ ಆತ ಮೌಲ್ವಿ ಅಂತ ಗೊತ್ತಾಗಿದ್ದು. ಐಎಂಎನಲ್ಲಿ ಹಣ ಹಾಕಿ ಅಂತ ಮೌಲ್ವಿ ಜನರಿಗೆ ಹೇಳಬಾರದಿತ್ತು.
ಎಸ್‍ಐಟಿ: ಪ್ರತ್ಯಕ್ಷವಾಗಿ ಅಲ್ಲದಿದ್ರೂ ನಿಮ್ಮ ಪಾತ್ರ ಪರೋಕ್ಷವಾಗಿ ಇದ್ದಂತಿದೆ. ಮನ್ಸೂರ್ ನನ್ನ ವಶಕ್ಕೆ ಪಡೆದ ನಂತರ ನೀವು ಮತ್ತೆ ವಿಚಾರಣೆಗೆ ಬರಬೇಕಾಗುತ್ತೆ.
ಜಮೀರ್: ನೀವು ಯಾವಾಗ ಕರೆದ್ರೂ ಬರ್ತೀನಿ.