ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಕುಮಾರ್ ನನ್ನು ನ್ಯಾಯಾಲಯಕ್ಕೆ ಒಪ್ಪಿಸಿ, 8 ದಿನಗಳ ಕಾಲ ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಎಕ್ಸ್ ಕ್ಯೂಟಿವ್ ಇಂಜಿನೀಯರ್ ಕುಮಾರ ಎಂಬವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ, 8 ದಿನನಗಳ ಕಾಲ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆರೋಪಿಯನ್ನು ನ್ಯಾಯಾಲಯ 8 ದಿನಗಳ ಕಾಲ ಎಸ್‍ಐಟಿ ವಶಕ್ಕೆ ನೀಡಿದೆ. ಮನ್ಸೂರ್ ಖಾತೆಯಿಂದ ಕುಮಾರ್ ಖಾತೆಗೆ 5 ಕೋಟಿ ರೂ. ಹಣ ವರ್ಗಾವಣೆಯಾಗಿದ್ದು, ಈ ಕುರಿತು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಎಸ್‍ಐಟಿ ತಂಡದ ಡಿವೈಎಸ್‍ಪಿ ಅನೀಲ್ ಭೂಮಿರೆಡ್ಡಿ ನೇತೃತ್ವದಲ್ಲಿ ಫ್ರಂಟ್ ಲೈನ್ ಫಾರ್ಮಾಸಿ ಮಳಿಗೆಗಳನ್ನು ಪರಿಶೀಲಿಸಲಾಗಿದೆ.
Advertisement
Advertisement
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಕಾರ್ಯಾಚರಣೆ ಮುಂದುವರಿಸಿದ್ದು, ಐಎಂಎ ಒಡೆತನದ ಫ್ರಂಟ್ ಲೈನ್ ಫಾರ್ಮಸಿಯ ನೀಲಸಂದ್ರ ಹಾಗೂ ವಿಜಯನಗರದ ಔಷಧಿ ಮಳಿಗೆಗಳ ಮೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 60 ಸಾವಿರ ನಗದು ಹಾಗೂ 40 ಲಕ್ಷ ರೂ. ಮೌಲ್ಯದ ಔಷಧಿ ಹಾಗೂ ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.