ಬೆಂಗಳೂರು: ಸಾವಿರಾರು ಮಂದಿ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮನ್ಸೂರ್ ಖಾನ್ ಸಾಹುಕಾರ ಆಗಿದ್ದಾನೆ. ಐಎಂಎನಲ್ಲಿ ಹೂಡಿಕೆ ಮಾಡಿದ ಬಹುತೇಕ ಮಂದಿಯದು ಒಂದೊಂದು ರೀತಿಯ ಕರುಣಾಜನಕ ಕಥೆಯಿದ್ದು ಈಗ ಹಣವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.
ಆರ್.ಟಿ ನಗರದ 49 ವರ್ಷದ ಫರೀದಾ ಬೇಗ್ ಎಂಬವರು ತಮ್ಮ ಕಿಡ್ನಿ ಮಾರಿ, ಸಂಪಾದಿಸಿದ್ದ 3 ಲಕ್ಷ ಹಣ ಮನ್ಸೂರ್ ಖಾನ್ ಕಂಪನಿಯಲ್ಲಿ ಹೂಡಿದ್ದರು. ಫರೀದಾ ಬೇಗ್ ಮೂರು ವರ್ಷದ ಹಿಂದೆ ಸಂಬಂಧಿಕರೊಬ್ಬರಿಗೆ ಕಿಡ್ನಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೂರು ಲಕ್ಷ ಹಣ ಪಡೆದಿದ್ದರು.
ಫರೀದಾ ಬೇಗ್ ಆ ಹಣವನ್ನು ಇಬ್ಬರು ಪುತ್ರಿಯರ ಹೆಸರಿನಲ್ಲಿ ಠೇವಣಿ ಇಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಪರಿಚಿತ ವ್ಯಕ್ತಿಯೊಬ್ಬ ಐಎಂಎ ಕಂಪನಿಯ ಬಗ್ಗೆ ಹೇಳಿ, ಮಾಸಿಕ 10 ಸಾವಿರ ಬರುತ್ತೆ ಎಂದಿದ್ದರು.
ನಾನು ಹಣವನ್ನು ಹಣವನ್ನು ಐಎಂಇನಲ್ಲಿ ಹಾಕುವ ವೇಳೆ ಕಿಡ್ನಿ ಪಡೆದ ಮಹಿಳೆ, ಈ ರೀತಿ ದುಡ್ಡು ಹಾಕಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಆದರೆ, ಮಗಳ ಮದುವೆ ಖರ್ಚಿಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು, ಈಗ ಪರದಾಡ್ತಿದ್ದೇನೆ ಎಂದು ಫರೀದಾ ಬೇಗ್ ಕಣ್ಣೀರು ಹಾಕುತ್ತಿದ್ದಾರೆ.