-ಮನ್ಸೂರ್ ನಿಂದ 10 ಕೋಟಿ ಪಡೆದಿದ್ದ ಮುಜಾಹಿದ್ದೀನ್
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಶಿಷ್ಯ ಹಾಗೂ ಐಎಂಎ ನಿರ್ದೇಶಕ ಮುಜಾಹಿದ್ದೀನ್ ಅಲಿಯಾಸ್ ಖರ್ಚಿಪ್ ಮಜ್ಜುನ ಪ್ರೇಜರ್ ಟೌನ್ ಎಂಎಂ ರಸ್ತೆಯಲ್ಲಿರುವ ಮನೆ ಮೇಲೆ ಹತ್ತಕ್ಕು ಹೆಚ್ಚು ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ನಂತರ ಮುಜಾಹಿದೀನ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Advertisement
ಡಿಸಿಪಿ ಗಿರೀಶ್ ಮತ್ತು ಇಬ್ಬರು ಡಿವೈಎಸ್‍ಪಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮುಜಾಹಿದ್ದೀನ್‍ಗೆ ಸೇರಿದ ಫಾರ್ಚೂನರ್ ಕಾರ್ ವಶಕ್ಕೆ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕಾರಿನ ಡಿಕ್ಕಿಯಲ್ಲಿದ್ದ ಬುಕ್ಸ್, ಡೈರಿ, ರೆಕಾಡ್ರ್ಸ್‍ಗಳನ್ನು ಎಸ್‍ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮುಜಾಹೀದ್ ಅಲಿಯಾಸ್ ಖರ್ಚಿಪ್ ಮಜ್ಜು ಶಿವಾಜಿನಗರದಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಅಲ್ಲದೆ, ಮುಜಾಹಿದ್ದೀನ್ ಯಾವಾಗಲೂ ಜಮೀರ್ ಜೊತೆಯಲ್ಲಿಯೇ ಇರುತ್ತಿದ್ದ ಎಂದು ತಿಳಿದು ಬಂದಿದೆ.
Advertisement
Advertisement
ಎಸ್‍ಐಟಿ ಅಧಿಕಾರಿಗಳು ಮುಜಾಹೀದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮನ್ಸೂರ್ ಖಾನ್‍ನಿಂದಲೇ 10 ಕೋಟಿ ರೂ. ಹಣ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮನ್ಸೂರ್ ಖಾನ್ ವಿರುದ್ಧ ಯಾರೂ ತಿರುಗಿ ಬೀಳಬಾರದು ಎಂದು ಮನ್ಸೂರ್ ಖಾನ್ ಬಳಿ ಹಣ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಐಎಎಸ್ ಅಧಿಕಾರಿಗಳ ಬಾಯಿ ಮುಚ್ಚಿಸಲು ಐಪಿಎಸ್ ಅಧಿಕಾರಿಗಳಿಗೆ ಹಣ ನೀಡಿದ್ದು, ಮನ್ಸೂರ್ ವಿರುದ್ಧ ಯಾರೂ ಪ್ರಶ್ನೆ ಮಾಡದಂತೆ ಸಹಾಯ ಮಾಡಲು ಹಣ ಪಡೆದು ಅಧಿಕಾರಿಗಳಿಗೆ ನೀಡುತ್ತಿದ್ದ ಎಂದು ಎಸ್‍ಐಟಿ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಮುಜಾಹಿದ್ದೀನ್ ಮಾಹಿತಿ ಮೇರೆಗೆ ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಹೆಸರನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.